ನಿಪ್ಪಾಣಿ: ನಗರದ ಶಿರಗುಪ್ಪಿ ರಸ್ತೆಯ ಕ್ರಾಸ್ ಹತ್ತಿರ ಇಬ್ಬರು ಆರೋಪಿತರನ್ನು ದಸ್ತಗಿರಿ ಮಾಡಿ ಅವರಿಂದ 23 ಬೈಕ್ ವಶಪಡಿಸಿಕೊಳ್ಳಲಾಗಿದೆ. ಕಳ್ಳತನ ಮಾಡಿರುವ ಇತರೇ 22 ಮೋಟರ ಸೈಕಲಗಳು ಹೀಗೆ ಒಟ್ಟು ರೂ. 16,10,000/-ಕಿಮ್ಮತ್ತಿನ 23 ಮೋಟರ ಸೈಕಲಗಳನ್ನು ವಶಪಡಿಸಿಕೊಳ್ಳಲಾಗಿದೆ.
ಒಂದು ಮೋಟಾರ ಸೈಕಲ್ನ್ನು ಜಪ್ತ ಮಾಡಿ, ಹೆಚ್ಚಿನ ತನಿಖೆ ಕುರಿತು ವಿಚಾರಣೆ ಮಾಡಿದಾಗ ಸದರಿ ಆರೋಪಿತರು ಧಾರವಾಡ ಜಿಲ್ಲೆಯ ಧಾರವಾಡ ಉಪನಗರ ಠಾಣೆ-02, ಬೆಳಗಾವಿ ಶಹರದ ಕೆಳಕಂಡ ಪೊಲೀಸ್ ಠಾಣೆ ವ್ಯಾಪ್ತಿಯ ಮಾರ್ಕೇಟ -01, ಎಪಿಎಮ್ಸಿ -01, ಮಾರಿಹಾಳ-04, ಸಂಕೇಶ್ವರ -01, ಬೈಲಹೊಂಗಲ-01, ನಿಪ್ಪಾಣಿ ಶಹರ -01 ಹಾಗೂ ಇನ್ನೂ 12 ಮೋಟಾರ ಸೈಕಲಗಳನ್ನು ಕಳವು ಮಾಡಿದ್ದಾರೆ.
ಡಾ: ಸಂಜೀವ ಎಂ.ಪಾಟೀಲ, ಎಸ್.ಪಿ., ಎಮ್ ವೇಣುಗೋಪಾಲ ಹೆಚ್ಚುವರಿ ಎಸ್. ಪಿ. , ಬಸವರಾಜ ಯಲಿಗಾರ , ಡಿ.ಎಸ್.ಪಿ, ಚಿಕ್ಕೋಡಿ, ಎಸ್.ಸಿ ಪಾಟೀಲ ಸಿ.ಪಿ.ಐ, ನಿಪ್ಪಾಣಿ ರವರುಗಳ ಮಾರ್ಗದರ್ಶನದಲ್ಲಿ ಹಾಗೂ ವಿನೋದ ಪೂಜಾರಿ ಪಿ.ಎಸ್.ಐ. ನಿಪ್ಪಾಣಿ ಶಹರ ಪೊಲೀಸ್ ಠಾಣೆ ಇವರ ನೇತೃತ್ವದಲ್ಲಿ ಮತ್ತು ನಿಪ್ಪಾಣಿ ಶಹರ ಪೊಲೀಸ ಠಾಣೆಯ ಸಿಬ್ಬಂದಿ ಎಮ್. ಜಿ. ಮುಜಾವರ ಎ.ಎಸ್.ಐ., ಆರ್.ಜಿ. ದಿವಟಿ, ಪಿ.ಎಮ್.ಗಸ್ತಿ, ಎಮ್.ಐ.ಕಲ್ಯಾಣಿ, ಗಜಾನನ ಬೋವಿ, ಸಲೀಂ ಮುಲ್ಲಾ, ಎಸ್.ಎನ್.ಅಸ್ಥಿ, ಯಾಸೀನ ಮೌಲಾ ಕಲಾವಂತ ಈ ಕಾರ್ಯಾಚರಣೆ ಮಾಡಿದ್ದಾರೆ. ಸದರಿ ಕಾರ್ಯಾಚರಣೆ ಬಗ್ಗೆ ಎಸ್.ಪಿ.ಯವರು ಪ್ರಶಂಶೆಯನ್ನು ವ್ಯಕ್ತಪಡಿಸಿ ಬಹುಮಾನವನ್ನು ಘೋಷಿಸಿರುತ್ತಾರೆ.