ರಾಯಬಾಗ :
ಪ್ರಗತಿಪರ ಖ್ಯಾತ ಸಾಹಿತಿ, ರಾಯಬಾಗದ ಎಸ್.ಪಿ. ಮಂಡಳ ಪದವಿ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ. ಯಲ್ಲಪ್ಪ ಹಿಮ್ಮಡಿ ಅವರು ತಮ್ಮ ಪ್ರಾಧ್ಯಾಪಕ ವೃತ್ತಿಯ ಸುದೀರ್ಘ ಸೇವೆಯ ನಿವೃತ್ತಿ ಹಿನ್ನೆಲೆಯಲ್ಲಿ ಅವರ ಅಪಾರ ವಿದ್ಯಾರ್ಥಿ ಬಳಗ ಫೆ.19 ರಂದು ರಾಯಬಾಗದ ಮಹಾವೀರ ಭವನದಲ್ಲಿ ಸಂಭ್ರಮದ ಅಭಿನಂದನಾ ಸಮಾರಂಭ ಆಯೋಜಿಸಿದೆ.
ಅಂದು ಮುಂಜಾನೆ 10 ಗಂಟೆಗೆ ‘ವಿದ್ಯಾರ್ಥಿಗಳು ಕಂಡಂತೆ ಡಾ. ಹಿಮ್ಮಡಿ ಮತ್ತು ಅವರ ಸಾಹಿತ್ಯ’ ವಿಷಯ ಕುರಿತು ವಿಚಾರ ಸಮರ್ಪಣೆ ಕಾರ್ಯಕ್ರಮ ಜರುಗಲಿದೆ. ಡಾ. ಕೆ. ಎನ್. ದೊಡ್ಡಮನಿ, ಡಾ. ವಿಜಯಮಾಲಾ ನಾಗನೂರಿ, ರಾಜು ಸನದಿ, ಈರಣ್ಣ ಬೆಟಗೇರಿ, ಸುಪ್ರಿಯಾ ಕಾಂಬಳೆ, ಅನಿತಾ ಲಂಗೋಟಿ ವಿಚಾರ ಮಂಡನೆ ಮಾಡಲಿದ್ದಾರೆ. ವಿಜಯಪುರ ಮಹಿಳಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ವಿಷ್ಣು ಶಿಂಧೆ ಅಧ್ಯಕ್ಷತೆ ವಹಿಸಲಿದ್ದಾರೆ.
ಮಧ್ಯಾಹ್ನ 12 ಗಂಟೆಗೆ ಡಾ. ಯಲ್ಲಪ್ಪ ಹಿಮ್ಮಡಿ ಮತ್ತು ಸದಾಶಿವ ದೇಶಿಂಗೆ ಅವರ ಉಪಸ್ಥಿತಿಯಲ್ಲಿ ‘ಗುರುವಿಗೆ ವಂದನೆ – ಶಿಷ್ಯರಿಗೆ ಅಭಿನಂದನೆ’ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಿ.ಎಸ್. ನಾಯಕ, ಪ್ರೊ. ಎಲ್.ವಿ. ಪಾಟೀಲ, ಡಾ. ಮಂಜುಳಾ ಸವದತ್ತಿ, ಕು.ಫಿರ್ದೋಶ್ ಮುಶ್ರಫ್ ಅಭಿನಂದನಾಪರ ಮಾತನಾಡಲಿದ್ದಾರೆ.
ಮಧ್ಯಾಹ್ನ 2 ಗಂಟೆಗೆ ಡಾ. ಹಿಮ್ಮಡಿ ದಂಪತಿಗಳಿಗೆ ಅಭಿನಂದನಾ ಸಮರ್ಪಣೆ ಪ್ರಧಾನ ಕಾರ್ಯಕ್ರಮ ಜರುಗಲಿದ್ದು, ಬಸವಬೆಳವಿ ಶ್ರೀ ಚ.ಚ. ವಿರಕ್ತಮಠದ ಶ್ರೀ ಶರಣಬಸವ ದೇವರು ಸಾನಿಧ್ಯ ವಹಿಸಲಿದ್ದಾರೆ. ಖ್ಯಾತ ಇತಿಹಾಸ ತಜ್ಞ ಡಾ. ಶಿವರುದ್ರ ಕಲ್ಲೋಳಿಕರ ಅಭಿನಂದನಪರ ಮಾತಗಳನ್ನಾಡಲಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ರಾಜಪ್ಪ ದಳವಾಯಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಡಾ. ಯಲ್ಲಪ್ಪ ಹಿಮ್ಮಡಿ ಅಭಿನಂದನಾ ಸಮಿತಿಯ ಅಧ್ಯಕ್ಷ ಸದಾಶಿವ ದೇಸಿಂಗೆ, ಉಪಾಧ್ಯಕ್ಷ ಡಾ. ವಿಷ್ಣು ಶಿಂಧೆ ಹಾಗೂ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.