ಮೂಡಿಗೆರೆ :
ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿ ಶಾಸಕ ಎಂ.ಪಿ. ಕುಮಾರಸ್ವಾಮಿಯವರಿಗೆ 4 ವರ್ಷ ಜೈಲು ಶಿಕ್ಷೆಯಾಗಿದೆ. ಹೂವಪ್ಪಗೌಡ ಎಂಬುವವರಿಂದ ಕುಮಾರಸ್ವಾಮಿ 1.35 ಕೋಟಿ ರೂ . ಸಾಲ ಪಡೆದಿದ್ದರು . ಈ ಹಣ ಪಾವತಿಸಲು ಕುಮಾರಸ್ವಾಮಿ 8 ಚೆಕ್ ನೀಡಿದ್ದರು. ಆದರೆ ಎಲ್ಲಾ ಚೆಕ್ ಬೌನ್ಸ್ ಆಗಿತ್ತು . ಹೀಗಾಗಿ ಹೂವಪ್ಪಗೌಡ ಪ್ರಕರಣ ದಾಖಲಿಸಿದ್ದು , ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ 8 ಪ್ರಕರಣಕ್ಕೆ ಸಂಬಂಧಿಸಿದಂತೆ ತಲಾ 6 ತಿಂಗಳಿನಂತೆ ಒಟ್ಟು 4 ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ .