ಬೆಳಗಾವಿ :
ಮೈಸೂರಿನ ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ ಕೊಡ ಮಾಡುವ ಶಿಕ್ಷಣ ಶಿಲ್ಪಿ 2022-23 ನೇ ಸಾಲಿನ ಪ್ರಶಸ್ತಿ ಬೆಳಗಾವಿ ಟಿಳಕವಾಡಿ ಮಾಲತಿಬಾಯಿ ಸಾಳುಂಕೆ ಪ್ರೌಢಶಾಲೆಯ ಕನ್ನಡ ವಿಷಯದ ಶಿಕ್ಷಕ ಅಶೋಕ ನಿಂಗಪ್ಪ ಅಣ್ಣಿಗೇರಿ ಅವರಿಗೆ ಲಭಿಸಿದೆ.
ಪ್ರೌಢಶಾಲಾ ಶಿಕ್ಷಕರ ಸಂಘದ ಮಾಜಿ ಜಿಲ್ಲಾಧ್ಯಕ್ಷರು ಆಗಿರುವ ಅವರು ಸುಮಾರು 30 ವರ್ಷಗಳಿಂದ ಶಿಕ್ಷಣ ರಂಗದಲ್ಲಿ ಗಣನೀಯ ಸಾಧನೆಗೈದ ಹಿನ್ನೆಲೆಯಲ್ಲಿ ಈ ರಾಜ್ಯ ಮಟ್ಟದ ಶಿಕ್ಷಣ ಶಿಲ್ಪಿ ಪ್ರಶಸ್ತಿಯನ್ನು ಸೋಮವಾರ ಮೈಸೂರಿನಲ್ಲಿ ನಡೆದ ಸಮಾರಂಭದಲ್ಲಿ ನೀಡಿ ಗೌರವಿಸಲಾಗಿದೆ.