ರಡ್ಡೆರಹಟ್ಟಿ :
ಸಮೀಪದ ಘಟ್ಟನಟ್ಟಿ ಕ್ರಾಸ್ ಬಳಿ ಭೀಕರಅಪಘಾತವಾಗಿದ್ದು ಸವದತ್ತಿ ಯಲ್ಲಮ್ಮ ದೇವಿಯ ದರ್ಶನ ಪಡೆದು ಮರಳಿ ತಮ್ಮೂರಿಗೆ ತೆರಳುತ್ತಿರುವಾಗ ಈ ಅಪಘಾತ ಸಂಭವಿಸಿದೆ. ಇವರು ಸಿಂದಗಿ ತಾಲೂಕಿನ ಭಕ್ತಾದಿಗಳಾಗಿದ್ದು ತಮ್ಮ ಊರಿಗೆ ತೆರಳುವಾಗ ಜಮಖಂಡಿ ಮಾರ್ಗದಿಂದ ಅಥಣಿಗೆ ಬರುವಾಗ ಗೂಡ್ಸ್ ಲಾರಿ ಹೊಡೆದಿದ್ದು
ಕ್ರೂಜರ್ನಲ್ಲಿ 12 ಜನರ ಪೈಕಿ ಇಬ್ಬರ ಸ್ಥಿತಿ ಚಿಂತಾಜನಕವಾಗಿರುತ್ತದೆ. ಇವರನ್ನು ಅಂಬುಲೆನ್ಸ್ ಮುಖಾಂತರ ಸ್ಥಳೀಯ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಪ್ರಕರಣ ಅಥಣಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದೆ.