ಫೆಬ್ರುವರಿ 24 ರಂದು VTU 22ನೇ ಘಟಿಕೋತ್ಸವ..!
ಬೆಳಗಾವಿಯ ಇಬ್ಬರು ಸೇರಿ ಮೂವರಿಗೆ “ಗೌರವ ಡಾಕ್ಟರ್” ಪದವಿ ಪ್ರಧಾನ..!
ಬೆಳಗಾವಿ : ನಗರದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 22ನೇ ಘಟಿಕೋತ್ಸವವನ್ನು ಫೆಬ್ರುವರಿ 24 ರಂದು ವಿಶ್ವವಿದ್ಯಾಲಯದ ಅಬ್ದುಲ್ ಕಲಾಂ ಸಭಾಂಗಣದಲ್ಲಿ ಬೆಳಗ್ಗೆ 11.30 ಕ್ಕೆ ಆಯೋಜಿಸಲಾಗಿದೆ ಎಂದು ವಿಟಿಯು ಕುಲಪತಿ ಪ್ರೊ ವಿಧ್ಯಾಶಂಕರ ಎಸ್ ಇಂದು (ಸೋಮವಾರ) ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಇದೆ ಮೊದಲ ಬಾರಿಗೆ ಡಾಕ್ಟರೇಟ್ ಪುರಸ್ಕಾರಕ್ಕಾಗಿ ಬೆಳಗಾವಿಯ ಸ್ಥಳಿಯ ಉದ್ಯಮಿಗಳನ್ನು ಆಯ್ಕೆ ಮಾಡಲಾಗಿದೆ.
ಈ ಬಾರಿ ಒಟ್ಟು ಮೂವರು ಗಣ್ಯರಿಗೆ “ಡಾಕ್ಟರ್ ಆಪ್ ಸೈನ್ಸ್” ಗೌರವ ಪದವಿ ಪ್ರಧಾನ ಮಾಡಲಾಗುತ್ತಿದೆ.
ಇದರಲ್ಲಿ ಬೆಳಗಾವಿ ಮೂಲದವರಾದ ಟೊಯೋಟಾ ಕಿರ್ಲೊಸ್ಕರ ಉಪಾಧ್ಯಕ್ಷರಾಗಿದ್ದ ದಿ ವಿಕ್ರಂ ಕೀರ್ಲೊಸ್ಕರ ಅವರಿಗೆ ಮರಣೋತ್ತರವಾಗಿ ಹಾಗೂ ಸ್ಥಳಿಯ ಬೆಳಗಾವಿ ಪಿರೋಕಾಸ್ಟ್ ಇಂಡಿಯಾ ಪ್ರಾ ಲಿ ಎಂ ಡಿ ಉದ್ಯಮಿ ಸಚಿನ ಸಬನೀಸ್ ಹಾಗೂ WABCO ಅಧ್ಯಕ್ಷ ಎಮ್ ಲಕ್ಷ್ಮೀ ನಾರಾಯಣ ಇವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರಧಾನ ಮಾಡಲಾಗುತ್ತಿದೆ.
ಬೆಳ್ಳಿ ಹಬ್ಬದ ನಿಮಿತ್ತ ವಿಧ್ಯಾರ್ಥಿಗಳಿಗೆ “ಗೊಲ್ಡನ್ ಚಾನ್ಸ್ “..!
ಈ ವಿಶ್ವವಿದ್ಯಾಲಯ 1994 ರಲ್ಲಿ ಆರಂಭವಾಗಿದ್ದು. 1998 ರಲ್ಲಿ ಮೊದಲನೇ ತರಗತಿ ತೆರ್ಗಡೆಯಾಗಿದೆ. 1998 ರಿಂದ ಇಲ್ಲಿಯವರೆಗೆ 8 ಸೇಮಿಸ್ಟರ್ ಗಳಲ್ಲಿ ಹಾಜರಾತಿಯಾಗಿ ಪರೀಕ್ಷೆ ಬರೆದು ಅನುತ್ತಿರ್ಣರಾಗಿರುವ ವಿಧ್ಯಾರ್ಥಿಗಳಿಗೆ ಮಾತ್ರ ಮೊದಲ ಬಾರಿಗೆ “ಗೊಲ್ಡನ್ ಚಾನ್ಸ್” ಅಡಿಯಲ್ಲಿ ಪರೀಕ್ಷೆ ಬರೆಯಲು ಅವಕಾಶ ನಿಡಲಾಗಿದೆ. ಈ ಅವಕಾಶವು ಎರಡು ವಿಶೇಷ ಪರೀಕ್ಷೆಗಳಿಗೆ ಸಿಮಿತವಾಗಿದ್ದು, ಇದೆ ಬಗ್ಗೆ ಇಗಾಗಲೇ ಎರಡು ಬಾರಿ ಅಧಿಸೂಚನೆ ಹೊರಡಿಸಲಾಗಿದ್ದು VTU ಅಧಿಕೃತ ಜಾಲತಾಣದಲ್ಲಿ ಲಭ್ಯವಿದ್ದು ಇದರ ಸದುಪಯೋಗ ಪಡೆಯುವಂತೆ ಕುಲಪತಿ ವಿದ್ಯಾಶಂಕರ ತಿಳಿಸಿದರು.