ಬೆಳಗಾವಿ :
ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯ ಪ್ರಯುಕ್ತವಾಗಿ ಭಾನುವಾರ ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಸರೀಕಟ್ಟಿ ಗ್ರಾಮದಲ್ಲಿ ಶಿವಾಜಿ ಮಹಾರಾಜರ ಮೂರ್ತಿಯ ಪಕ್ಕದಲ್ಲಿ ಹೈಮಾಸ್ಟ್ ವಿದ್ಯುತ್ ದೀಪದ ಕಂಬವನ್ನು ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಉದ್ಘಾಟಿಸಿದರು.
ಈ ವೇಳೆ ಗ್ರಾಮಸ್ಥರು ಲಕ್ಷ್ಮೀ ಹೆಬ್ಬಾಳಕರ್ ಅವರನ್ನು ಸನ್ಮಾನಿಸಿ, ಹಾರೈಸಿದರು.
ಈ ಸಮಯದಲ್ಲಿ ಬಸವಣ್ಣಿ ಕೊಂಡಸಕೊಪ್ಪ, ಸಿದ್ದರಾಯಿ ನಾಗರೊಳಿ, ಮಾರುತಿ ಕೊಂಡಸಕೊಪ್ಪ, ಗಜಾನಂದ ತೆರಳೆ, ಹೊಳೆಪ್ಪ ಪೂಜೇರಿ, ದಿಲೀಪ್ ಕೊಂಡಸಕೊಪ್ಪ, ವಿಕ್ರಂ ದೇಸಾಯಿ, ಸಂಜಯ ದೇಸಾಯಿ, ವಿಠ್ಠಲ ಸುಳೇಭಾವಿ, ರಾಮಾ ಹಂಗರಗೆ, ಪ್ರಶಾಂತ ಕಲ್ಲಾನಾಚೆ, ಪಾಪು ಕೋಲಕಾರ, ಭರಮಾ ಮೊದಗೇಕರ್, ಲಕ್ಷ್ಮಣ ಜಿನೋಜಿ, ಯಲ್ಲಪ್ಪ ಸಾಂಬ್ರೇಕರ್, ಯಲ್ಲಪ್ಪ ಚೌಗುಲೆ, ರಾಜು ಕೊಂಡಸಕೊಪ್ಪ, ದೇವೇಂದ್ರ ಸುಳೇಭಾವಿ ಹಾಗೂ ಮುಂತಾದವರು ಉಪಸ್ಥಿತರಿದ್ದರು.