ಭಾರತೀಯ ರಾಷ್ಟ್ರೀಯ ತಂಡದಲ್ಲಿ ಮತ್ತೆ ಸ್ಥಾನ ಪಡೆಯುವ ಪ್ರಯತ್ನದಲ್ಲಿರುವ ಪೃಥ್ವಿ ಶಾ ಅವರು ಭರ್ಜರಿ ತ್ರಿಶತಕದ ಮೂಲಕ ಮುಂಚಿದರು. ಈ ಮೂಲಕ ಮುಂಬೈಯ ಈ ಯುವ ತಾರೆ ತಾವು ಒಬ್ಬ ಶ್ರೇಷ್ಠ ಬ್ಯಾಟ್ಸ್ಮನ್ ಎನ್ನುವುದನ್ನು ಮತ್ತೊಮ್ಮೆ ನಿರೂಪಿಸಿದ್ದಾರೆ.
ಮುಂಬಯಿ :
ರಣಜಿ ಕ್ರಿಕೆಟ್ ಪಂದ್ಯದಲ್ಲಿ
ಮುಂಬೈಯ ಪ್ರತಿಭಾವಂತ ಆಟಗಾರ ಅಮೋಘ ತ್ರಿಶತಕ ಬಾರಿಸಿದ್ದಾರೆ.
ಭಾರತೀಯ ಟೆಸ್ಟ್ ಕ್ರಿಕೆಟ್ ತಂಡದ ಆರಂಭಿಕ ಬ್ಯಾಟ್ಸ್ ಮನ್ ಪೃಥ್ವಿ ಶಾ ಅವರು ಬೃಹತ್ ಮೊತ್ತ ಪೇರಿಸಿದ್ದಾರೆ.
ತಮ್ಮ ಜೀವನದ ಅತ್ಯಂತ ಅಮೋಘ ಇನಿಂಗ್ಸ್ ನ್ನು ಅವರು ಇಂದು ಕಟ್ಟಿದ್ದಾರೆ.
49 ಫೋರ್ , 4 ಸಿಕ್ಸರ್ ನೆರವಿನಿಂದ 379 ರನ್ ರಣಜಿ ಟ್ರೋಫಿಯಲ್ಲಿ ಪೃಥ್ವಿ ಷಾ ಅಬ್ಬರಿಸಿದ್ದಾರೆ. ಅಸ್ಸಾಂ ವಿರುದ್ಧದ ಪಂದ್ಯದಲ್ಲಿ ಮುಂಬೈ ಪರ ಇನ್ನಿಂಗ್ಸ್ ಆರಂಭಿಸಿದ ಪೃಥ್ವಿ ಬೌಲರ್ಗಳನ್ನು ನಿರ್ದಾಕ್ಷಿಣ್ಯವಾಗಿ ಚುಚ್ಚಿ 379 ರನ್ ಗಳಿಸಿದ್ದಾರೆ.
ಅಬ್ಬರದ ಆಟವಾಡಿದ ಯುವ ಓಪನರ್ 49 ಫೋರ್ ಹಾಗೂ 4 ಸಿಕ್ಸರ್ ಬಾರಿಸಿದ್ದರು . ಇದರೊಂದಿಗೆ ರಣಜಿ ಟ್ರೋಫಿಯಲ್ಲಿ ಮುಂಬೈ ಪರ ಒಂದು ಇನ್ನಿಂಗ್ಸ್ನಲ್ಲಿ ಗರಿಷ್ಠ ರನ್ ಬಾರಿಸಿದ ದಾಖಲೆ ಬರೆದಿದ್ದಾರೆ. ರಣಜಿ ಇತಿಹಾಸದಲ್ಲಿ ಇದು ಎರಡನೇ ಗರಿಷ್ಠ ಮೊತ್ತವಾಗಿದೆ.