ಬೆಳಗಾವಿ :
ಪುತ್ರನನ್ನೇ ಕೊಂದಿದ್ದಾರೆಂದು ತಪ್ಪು ತಿಳಿದು ವ್ಯಕ್ತಿಯೊಬ್ಬನ ಕುತ್ತಿಗೆಗೆ ಇರಿದು ಕೊಲೆ ಮಾಡಲು ಯತ್ನಿಸಿದ್ದ ಮಹಿಳೆಗೆ ಬೆಳಗಾವಿಯ 9ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಇಂದು 5 ವರ್ಷ ಜೈಲು ಶಿಕ್ಷೆ ಮತ್ತು 10,000 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.
ಘಟನೆ ವಿವರ :
ಕಾಕತಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಸೋನಟ್ಟಿ ಗ್ರಾಮದಲ್ಲಿ ಆರೋಪಿತಳ ಮಗ 2017 ರಲ್ಲಿ ಕಳ್ಳಭಟ್ಟಿ ಸರಾಯಿ ಟಬ್ ದಲ್ಲಿ ಹಾಕಿಕೊಂಡು ಮೋಟರ್ ಸೈಕಲ್ ಮೇಲಿಂದ ಸೋನಟ್ಟಿ ಗ್ರಾಮದಿಂದ ದೇವಗಿರಿ ಗ್ರಾಮದ ಕಡೆಗೆ ಹೋಗುತ್ತಿರುವಾಗ ಹೊನಗಾ ದೇವಗಿರಿ ರಸ್ತೆ ಬದಿ ಇರುವ ಬಾವಿಯಲ್ಲಿ ಅಕಸ್ಮಾತ್ ಬಿದ್ದು , ತೀರಿಕೊಂಡಿದ್ದ.
ಆರೋಪಿಗಳು ತನ್ನ ಮಗನನ್ನು ಫಿರ್ಯಾದಿ ಸಿದ್ಧನಾಥ ರಾಜಕಟ್ಟಿ ಮತ್ತು ಅವರ ಅಣ್ಣ ಶಾನೂರ ರಾಜಕಟ್ಟಿ ಸಾ : ಸೋನಟ್ಟಿ , ತಾ : ಬೆಳಗಾವಿ ಇಬ್ಬರು ಕೂಡಿ ಕೊಲೆ ಮಾಡಿದ್ದಾರೆ ಅಂತಾ ಸಂಶಯಪಟ್ಟು ಅದೇ ಸಿಟ್ಟಿನಿಂದ ಆರೋಪಿತಳಾದ ಈರವ್ವಾ ಸಿದ್ದಪ್ಪ ಮುಚ್ಚಂಡಿ ಸಾ : ಸೋನಟ್ಟಿ , ತಾ : ಬೆಳಗಾವಿ ಹಾಲಿ : ಕಾಕತಿ ಲಕ್ಷ್ಮೀನಗರ , ತಾ : ಬೆಳಗಾವಿ ಇವಳು ದಿ : 22-11-2019 ರಂದು ಮಧ್ಯಾಹ್ನ 13-00 ಗಂಟೆಗೆ ಫಿರ್ಯಾದಿಯ ಅಣ್ಣ ಶಾನೂರ ರಾಜಕಟ್ಟಿ ಇವನು ನಡೆಸುತ್ತಿದ್ದ ಮೋಟರ್ ಸೈಕಲ್ ಹಿಂದೆ ಕುಳಿತುಕೊಂಡು ಅವನಿಗೆ ಕೊಲೆ ಮಾಡುವ ಉದ್ದೇಶದಿಂದ ಚಾಕುದಿಂದ ಕುತ್ತಿಗೆ ಕೊಯ್ದು ಕೊಲೆ ಮಾಡಲು ಪ್ರಯತ್ನಿಸಿದ್ದರಿಂದ ಆರೋಪಿತಳ ವಿರುದ್ಧ ಕಾಕತಿ ಠಾಣಾ ಗುನ್ನೆ ನಂ : 226/2019 ಕಲಂ 326 307 ಐಪಿಸಿ ರಡಿ ಪ್ರಕರಣ ದಾಖಲಿಸಿಕೊಂಡು ಹಿಂದಿನ ಮುಖ್ಯ ಪೇದೆ ಎ.ಬಿ.ಕುಂಡೇದ ಇವರು ತನಿಖೆ ಮಾಡಿ ನ್ಯಾಯಾಲಯಕ್ಕೆ ಸಲ್ಲಿಸಿದ್ದು , ಅಭಿಯೋಜಕರಾದ ಪಟ್ಟಿ ಬಿ.ಎಸ್.ಕೂಗುನವರ ಇವರು ಸದರಿ ಪ್ರಕರಣವನ್ನು ನಡೆಸಿ , ವಾದ ಮಂಡನೆ ಮಾಡಿದ್ದರು.
ಪ್ರಕರಣದ ವಾದ ವಿವಾದ ಆಲಿಸಿದ ನಂತರ 9 ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಮಾನ್ಯ ನ್ಯಾಯಾಧೀಶ ಗುರುರಾಜ ಗೋಪಾಲಚಾರ್ಯ ಶಿರೋಳ ಇವರು ಆರೋಪಿ ಈರವ್ವಾ ಸಿದ್ಧಪ್ಪ ಮುಚ್ಚಂಡಿ ಸ ಸೋನಟ್ಟಿ , ತಾ : ಬೆಳಗಾವಿ ಹಾಲಿ : ಕಾಕತಿ, ಲಕ್ಷ್ಮೀನಗರ , ತಾ : ಬೆಳಗಾವಿ ಇವಳಿಗೆ ದಿ : 09-01-2023 ರಂದು ಐದು ವರ್ಷ ಸಾದಾ ಜೈಲು ಹಾಗೂ ರೂ.10,000-00 ದಂಡ ವಿಧಿಸಿ ತೀರ್ಪು ನೀಡಿದ್ದು ಇರುತ್ತದೆ . ಸರಕಾರದ ಪರವಾಗಿ ಸರಕಾರಿ ಅಭಿಯೋಜಕ ಬಿ.ಎಸ್. ಕೂಗುನವರ ವಾದಿಸಿದ್ದರು.