ಬೆಳಗಾವಿ :
2D ಮೀಸಲಾತಿ ಗೊಂದಲಕರವಾಗಿದ್ದು, ಪಂಚಮಸಾಲಿಗಳಿಗೆ 24ಗಂಟೆಯೊಳಗೆ 2A ಮೀಸಲಾತಿ ಘೋಷಿಸಬೇಕು ಎಂದು ಜಯಮೃತ್ಯುಂಜಯ ಸ್ವಾಮಿ ಸರಕಾರವನ್ನು ಒತ್ತಾಯಿಸಿದ್ದಾರೆ.
ನಗರದ ಗಾಂಧೀ ಭವನದಲ್ಲಿ ಇಂದು ನಡೆದ ಪಂಚಮಸಾಲಿ ಹೋರಾಟದ ರಾಜ್ಯ ಕಾರ್ಯಕಾರಿಣಿ ಸಭೆಯ ನಂತರ ಮಾತನಾಡಿದರು.
ಸರಕಾರದ 2D ಮೀಸಲಾತಿ ಪಂಚಮಸಾಲಿಗಳಿಗೆ ಬೇಡವೇ ಬೇಡ ಎಂಬ ನಿರ್ಣಯ ಸುದೀರ್ಘ ಚರ್ಚೆಯ ನಂತರ ಇಂದು ಮಾಡಿದ್ದೇವೆ. ಏನಿದ್ದರೂ ನಮಗೆ 2A ಮೀಸಲಾತಿ ಮತ್ತು ಆ ವರ್ಗದ ಎಲ್ಲ ಸೌಲಭ್ಯಗಳು ಸಿಗಬೇಕು ಎಂದರು.
ಜ. 12ರೊಳಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 2Aಮೀಸಲಾತಿ ಘೋಷಿಸದಿದ್ದರೆ ಹಾವೇರಿಯ ಅವರ ಮನೆಯ ಎದುರು ಒಂದು ದಿನದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು.
ಆ ಪ್ರತಿಭಟನೆಯ ನಂತರವೇ ಮುಂದಿನ ಉಗ್ರ ಹೋರಾಟದ ರೂಪುರೇಷೆ ಅಲ್ಲಿಯೇ ಘೋಷಿಸಲಾಗುವುದು ಎಂದರು.
ಮಾಜಿ ಕೇಂದ್ರ ಸಚಿವ ಹಾಗೂ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್, ಕಾಶಪ್ಪನವರ ಮತ್ತಿತರರು ಉಪಸ್ಥಿತರಿದ್ದರು.