ಬೆಳಗಾವಿ :
ನಗರದ ಚವಾಟಗಲ್ಲಿ ಅಯ್ಯಪ್ಪ ಸ್ವಾಮಿ ಮಹಾಪೂಜೆ ಹಾಗೂ ಮಹಾಪ್ರಸಾದ ಕಾರ್ಯಕ್ರಮವು ರವಿವಾರ ಸಂಜೆ 7ರಿಂದ 11 ಗಂಟೆಯ ವರೆಗೆ ಭಕ್ತಿಭಾವದ ನಡುವೆ ಅದ್ದೂರಿಯಾಗಿ ಜರುಗಿತು.
ರವಿವಾರ ಸಂಜೆ ನಡೆದ ಅಯ್ಯಪ್ಪ ಸ್ವಾಮಿ ಮಹಾಪೂಜಾ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಭಾಗವಹಿಸಿ, ಮಹಾಪ್ರಸಾದವನ್ನು ಸ್ವೀಕರಿಸುವ ಮೂಲಕ ಅಯ್ಯಪ್ಪಸ್ವಾಮಿ ಭಕ್ತಿ ಸೇವೆಗೆ ಪಾತ್ರರಾದರು. ಗುರುಸ್ವಾಮಿಗಳಾದ ಕೃಷ್ಣ ಗುರುಸ್ವಾಮಿ, ಸುರೇಂದ್ರ ಗುರುಸ್ವಾಮಿ, ಪಪ್ಪು ಸ್ವಾಮಿ, ರಘು ಸ್ವಾಮಿ, ಅಡಿವೆಪ್ಪ ಸ್ವಾಮಿ, ಸುಭಾಷ್ ಸ್ವಾಮಿ, ರಾಜು ಸ್ವಾಮಿ, ಮಯೂರ ಸ್ವಾಮಿ, ರಘು ಕ್ಯಾಂಟೀನಸ್ವಾಮಿ, ಭಾಕನ ಸ್ವಾಮಿ, ಸಂಜು ಸ್ವಾಮಿ, ಕಾರ್ತಿಕ್ ಸ್ವಾಮಿ, ವಿಠಲ್ ಸ್ವಾಮಿ, ವೀರೇಶ್ ಗುರುಸ್ವಾಮಿ, ಅಭಿಷೇಕ್ ಸ್ವಾಮಿ ಇವರು ಶ್ರೀ ಅಯ್ಯಪ್ಪ ಸ್ವಾಮಿಯ ಮಹಾಪೂಜೆಯಲ್ಲಿ ಭಾಗವಹಿಸಿ ವಿಶೇಷ ಪೂಜೆ ನೆರವೇರಿಸಿದರು.
ಬಳಿಕ ಮಹಾಪೂಜೆಗೆ ವಿವಿಧ ಕಡೆಗಳಿಂದ ಆಗಮಿಸಿದ್ದ ಭಕ್ತಾದಿಗಳು ವಿಶೇಷ ಪೂಜೆ ಸಲ್ಲಿಸಿ ಪುನೀತರಾದರು. ನಂತರ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರು ಮಹಾಪ್ರಸಾದವನ್ನು ಸ್ವೀಕರಿಸಿದರು. ಅಯ್ಯಪ್ಪ ಸ್ವಾಮಿ ವಿಗ್ರಹಕ್ಕೆ ಹೂವುಗಳಿಂದ ವಿಶೇಷ ಅಲಂಕಾರದೊಂದಿಗೆ ದೀಪಾಲಂಕಾರವನ್ನು ಮಾಡಲಾಗಿತ್ತು.