ನೋಟ್ ಬ್ಯಾನ್ ಸುಪ್ರೀಂ 4.1 ಅನುಪಾತದ ತೀರ್ಪು 2016 ರ ನೋಟ್ ಬ್ಯಾನ್ ಪ್ರಶ್ನಿಸಿ ಸಲ್ಲಿಕೆಯಾಗಿದ್ದ 58 ಅರ್ಜಿ ವಜಾಗೊಳಿಸಿದ ಸುಪ್ರೀಂ ಪಂಚ ಪೀಠ , 4.1 ಅನುಪಾತದಲ್ಲಿ ತೀರ್ಪು ಪ್ರಕಟಿಸಿದೆ . ಆ ಮೂಲಕ ಕೇಂದ್ರ ಸರ್ಕಾರದ ನೋಟ್ ಬ್ಯಾನ್ ಕ್ರಮ ಸಿಂಧು ಎಂದು ಎತ್ತಿ ಹಿಡಿದಿದೆ . ನ್ಯಾ.ನಜೀರ್ ನೇತೃತ್ವದ ಪಂಚಪೀಠದಲ್ಲಿ ನಾಲ್ವರು ನ್ಯಾಯಮೂರ್ತಿಗಳಾದ ಬಿಆರ್ ಗವಾಯಿ , ನ್ಯಾ.ಎಎಸ್ ಬೋಪಣ್ಣ ಹಾಗೂ ವಿ . ರಾಮಸುಬ್ರಮಣಿಯನ್ ನೋಟ್ ಬ್ಯಾನ್ ಸರಿಯಾದ ಕ್ರಮ ಎಂದು ಹೇಳಿದೆ . ಆದರೆ , ನ್ಯಾ . ನಾಗರತ್ನ ಅವರು ವ್ಯತಿರಿಕ್ತ ತೀರ್ಪು ನೀಡಿದ್ದಾರೆ .
ದೆಹಲಿ :
ಮೋದಿ ಸರ್ಕಾರಕ್ಕೆ ನ್ಯಾಯಾಲಯ ಬಿಗ್ ರಿಲೀಫ್ ನೀಡಿದೆ.
500 ಹಾಗೂ 1,000 ರೂ . ನೋಟುಗಳನ್ನು ಅಮಾನೀಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ . ಕೇಂದ್ರ ಸರ್ಕಾರದ ನೋಟು ಅಮಾನೀಕರಣ ನಿರ್ಧಾರ ಸರಿಯಾಗಿದೆ ಎಂದು ನ್ಯಾಯಮೂರ್ತಿ ಎಸ್.ಎ. ನಜೀರ್ ನೇತೃತ್ವದ ಐವರು ನ್ಯಾಯಮೂರ್ತಿಗಳಿರುವ ಪೀಠವು ತೀರ್ಪು ಪ್ರಕಟಿಸಿದೆ . 2016 ರಲ್ಲಿ ಸರ್ಕಾರವು ನೋಟು ಬ್ಯಾನ್ ಮಾಡುವ ನಿರ್ಧಾರಕ್ಕೆ ಸಂಬಂಧಿಸಿದ ದಾಖಲೆ ಸಲ್ಲಿಸಬೇಕೆಂದು ಸುಪ್ರೀಂ ಕೋರ್ಟ್ 2022 ರ ಡಿ .7 ರಂದು ಕೇಂದ್ರ ಸರ್ಕಾರ ಮತ್ತು ಆರ್ಬಿಐಗೆ ನಿರ್ದೇಶನ ನೀಡಿತ್ತು .
ನೋಟ್ ಬ್ಯಾನ್ ಪ್ರಶ್ನಿಸಿ ಸಲ್ಲಿಸಲಾಗಿರುವ 58 ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ . ನೋಟ್ ಅಮಾನೀಕರಣ ವಿಚಾರಗಳಲ್ಲಿ ಸುಪ್ರೀಂ ಮಧ್ಯಪ್ರವೇಶಿಸುವಂತಿಲ್ಲ . ನೋಟ್ ಬದಲಿಸಲು ಸರ್ಕಾರ ಜನರಿಗೆ ನೀಡಿದ ಕಾಲಾವಕಾಶ ಸರಿಯಾಗಿದೆ . ಆ ಮೂಲಕ ಪಂಚಪೀಠವು ಕೇಂದ್ರ ಸರ್ಕಾರದ ಕ್ರಮದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎನ್ನುವ ಅಭಿಪ್ರಾಯವನ್ನು ತಿಳಿಸಿದೆ .
ನೋಟ್ ಬ್ಯಾನ್ ಸಂಸತ್ತಿನಲ್ಲಿ ಚರ್ಚಿಸಬೇಕೆಂದ ಪೀಠ :
ನೋಟು ಅಮಾನೀಕರಣ ಆರಂಭಿಸಿರುವುದು ಕೇಂದ್ರ ಸರ್ಕಾರವೇ ಹೊರತು ಆರ್ಬಿಐ ಅಲ್ಲ ಎಂದು ನ್ಯಾ . ನಾಗರತ್ನ ಹೇಳಿದ್ದಾರೆ . ಈ ಕೇಸ್ನಲ್ಲಿ 2 ನೇ ತೀರ್ಪು ಓದಿದ ಅವರು , ನೋಟ್ ಬ್ಯಾನ್ಗೆ ಕೇಂದ್ರ ಹಾಗೂ ಆರ್ಬಿಐಗೆ ಅಧಿಕಾರವಿದೆ . ಆದರೆ , ನೋಟ್ ಬ್ಯಾನ್ ಆರ್ಬಿಐಯ ಪರಮಾಧಿಕಾರವಲ್ಲ .
ಕೇಂದ್ರದ ನೋಟು ಅಮಾನೀಕರಣ ನೀತಿಯನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ . 2016 ರ ನವೆಂಬರ್ 8 ರಂದು ರಾತ್ರಿ 8:15 ರ ಸುಮಾರಿಗೆ ಪ್ರಧಾನಿ ಮೋದಿ ದೇಶವನ್ನುದ್ದೇಶಿಸಿ ಮಾತನಾಡಿ , 500 ಹಾಗೂ 1000 ರೂಪಾಯಿ ಮುಖಬೆಲೆಯ ನೋಟುಗಳನ್ನು ಅಮಾನ್ಯಗೊಳಿಸಿದ್ದರು . ಮೋದಿ ತೆಗೆದುಕೊಂಡ ನಿರ್ಧಾರ ಭಾರತವಷ್ಟೇ ಅಲ್ಲ , ಇಡೀ ಜಗತ್ತೇ ಬೆರಗಾಗುವಂತೆ ಮಾಡಿತ್ತು . ಬಳಿಕ 1000 , 500 ಹಾಗೂ 2000 ಮುಖಬೆಲೆಯ ಹೊಸ ನೋಟುಗಳನ್ನು ಪರಿಚಯಿಸಲಾಗಿತ್ತು .