ಎಂ.ಕೆ.ಹುಬ್ಬಳ್ಳಿ :
ಬಿಜೆಪಿಯ ಚಾಣಕ್ಯ ಎಂದೇ ಹೆಸರುವಾಸಿಯಾಗಿರುವ ಕೇಂದ್ರ ಗೃಹ ಸಚಿವ ಅಮಿತ್ ಷಾ ಇಂದು ಎಂ.ಕೆ. ಹುಬ್ಬಳ್ಳಿಯಲ್ಲಿ ವಿಜಯ ಸಂಕಲ್ಪ ಯಾತ್ರೆ ಉದ್ದೇಶಿಸಿ ಅವರು ತಮ್ಮ ಗುಡುಗು ಸಿಡಿಲಿನ ಭಾಷಣದಿಂದ ಕರ್ನಾಟಕ ವಿಧಾನಸಭೆಯ ಚುನಾವಣೆಯ ರಣಕಹಳೆ ಮೊಳಗಿಸಿದ್ದಾರೆ. ಈ ಮೂಲಕ ಕರ್ನಾಟಕದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಇರಬೇಕು ಎಂದು ತಮ್ಮ ಅಭಿಲಾಷೆಯನ್ನು ವ್ಯಕ್ತಪಡಿಸಿದ್ದಾರೆ ತಮ್ಮ ಭಾಷಣದುದ್ದಕ್ಕೂ ಅವರು ವಿರೋಧ ಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್ ನ್ನು ಬಲವಾಗಿ ತಿವಿದಿದ್ದಾರೆ.
ಕಾಂಗ್ರೆಸ್ ನಿಂದ ಕರ್ನಾಟಕಕ್ಕೆ ಮೋಸ : 2007 ರಲ್ಲಿ ವಿಧಾನಸಭಾ ಚುನಾವಣೆ ವೇಳೆ ಗೋವಾದಲ್ಲಿ ಮಾತನಾಡಿದ್ದ ಆಗ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಸೋನಿಯಾ ಗಾಂಧಿ ಕರ್ನಾಟಕಕ್ಕೆ ಮಹಾದಾಯಿ ನೀರು ಹರಿಸಲ್ಲವೆಂದು ಹೇಳುವ ಮೂಲಕ ರಾಜ್ಯಕ್ಕೆ ಮೋಸ ಮಾಡಿದ್ದು ಕಾಂಗ್ರೆಸ್ . ಆದರೆ ನಾವು ಎರಡೂ ರಾಜ್ಯದಲ್ಲಿ ಸಮನ್ವಯತೆ ಸಾಧಿಸುತ್ತಿದ್ದೇವೆ, ಕರ್ನಾಟಕಕ್ಕೆ ಮಹದಾಯಿಯ ನೀರು ಹರಿಸಲು ಶ್ರಮಿಸಿದ್ದೇವೆ ಎಂದು ಅಮಿತ್ ಶಾ ತಿಳಿಸಿದ್ದಾರೆ.
ಬೆಳಗಾವಿಯಿಂದ ಕಿತ್ತೂರು ಮಾರ್ಗವಾಗಿ ಧಾರವಾಡಕ್ಕೆ ನೇರ ರೈಲು ಮಾರ್ಗವನ್ನು ನರೇಂದ್ರ ಮೋದಿ ಸರ್ಕಾರ ಮಾಡಿಕೊಟ್ಟಿದೆ. ಇದರಿಂದ ಸಾಕಷ್ಟು ಸಮಯ ಉಳಿತಾಯವಾಗಿದೆ ಎಂದು ಹೇಳಿದರು.
ಕಾಂಗ್ರೆಸ್ ಹೈಕಮಾಂಡ್ ಕರ್ನಾಟಕ ಸರ್ಕಾರವನ್ನು ಎಟಿಎಂ ಮಾಡಿಕೊಂಡಿತ್ತು . ಆದರೆ, ನಾವು ಎಲ್ಲಾ ದುರಾವಸ್ಥೆ ಸರಿ ಮಾಡಿದ್ದೇವೆ ಎಂದಿದ್ದಾರೆ.
ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಬಡವರ ಉದ್ಧಾರಕ್ಕೆ ಏನೂ ಶ್ರಮಿಸಿವೆ. ಈ ಎರಡು ಪಕ್ಷಗಳು ಏನು ಕೆಲಸ ಮಾಡಿಲ್ಲ ಎಂದು ದೂರಿದರು.
ಕೊರೊನಾ ಕಾಲಘಟ್ಟದಲ್ಲಿ ನರೇಂದ್ರ ಮೋದಿ ಸರಕಾರ ಸಾಕಷ್ಟು ದುಡಿದಿದೆ. ಎಲ್ಲಾ ಜನರಿಗೆ ವ್ಯಾಕ್ಸಿನ್ ನೀಡಿದೆ ಎಂದು ಹೇಳಿದರು.
ಬಿಜೆಪಿ ಸರಕಾರಕ್ಕೆ ಎರಡು ಸಲ ರಾಷ್ಟ್ರಪತಿ ಆಯ್ಕೆ ಮಾಡುವ ಅವಕಾಶ ಸಿಕ್ಕಿದೆ, ಈ ಸಂದರ್ಭದಲ್ಲಿ ಬಿಜೆಪಿ ದಲಿತ ಮತ್ತು ಆದಿವಾಸಿ ಬುಡಕಟ್ಟು ಸಮಾಜಕ್ಕೆ ಸೇರಿದ ವ್ಯಕ್ತಿಗಳನ್ನು ರಾಷ್ಟ್ರಪತಿ ಮಾಡುವ ಮೂಲಕ ಉನ್ನತ ಹುದ್ದೆಗೆ ಹಿಂದುಳಿದವರನ್ನು ಕೂರಿಸುವ ಕೆಲಸ ಮಾಡಿದೆ ಎಂದು ಹೇಳಿದರು.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಸಂಪೂರ್ಣ ಬಹುಮತದಿಂದ ಅಧಿಕಾರಕ್ಕೆ ಬರಬೇಕು. ಈ ನಿಟ್ಟಿನಲ್ಲಿ ನಾಡಿನ ಜನತೆ ಬಿಜೆಪಿಯನ್ನು ಸಂಪೂರ್ಣವಾಗಿ ಬೆಂಬಲಿಸಬೇಕು ಎಂದು ಅವರು ಮನವಿ ಮಾಡಿದರು.
ಯಡಿಯೂರಪ್ಪ ವಾಗ್ದಾಳಿ :
ಬೆಳಗಾವಿ ಭಾಗಕ್ಕೆ ವಂದೇ ಮಾತರಂ ರೈಲು..
ಬೆಳಗಾವಿ ಭಾಗಕ್ಕೆ ವಂದೇ ಮಾತರಂ ರೈಲು ಯೋಜನೆ ಮತ್ತು ಕೆಲವೇ ದಿನಗಳಲ್ಲಿ ಮಹದಾಯಿ ಯೋಜನೆಗೆ ಶಂಕುಸ್ಥಾಪನೆ ಮಾಡಲಾಗುವುದು ಎಂದು ಮಾಜಿ ಸಿಎಂ ಸಿಎಂ ಯಡಿಯೂರಪ್ಪ ಹೇಳಿದರು . ಕಾಂಗ್ರೆಸ್ ಪಕ್ಷ ಜನಹಿತವನ್ನು ಸಂಪೂರ್ಣವಾಗಿ ಕಡೆಗಣಿಸಿತ್ತು. ಪ್ರಧಾನಿ ಮೋದಿ ಅಧಿಕಾರಕ್ಕೆ ಬಂದ ಬಳಿಕ ದೇಶ ಅಭಿವೃದ್ಧಿ ಆಗುತ್ತಿದೆ ಎಂದರು.
ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದನ್ನು ತಡೆಯಲು ಯಾರಿಂದಲೂ ತಡೆಯಲಾಗಲ್ಲ . ರಾಜ್ಯದಲ್ಲಿ ಬಿಜೆಪಿಗೆ 140 ಸೀಟ್ ತರಲು ಶ್ರಮಿಸೋಣ ಎಂದು ಬಿಎಸ್ವೈ ಹೇಳಿದರು. ಪ್ರಧಾನಿ ನರೇಂದ್ರ ಮೋದಿ , ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಎಲ್ಲಾ ಕ್ಷೇತ್ರಗಳ ಅಭಿವೃದ್ಧಿ ಮಾಡಲಾಗುತ್ತಿದೆ . ಯಾವುದೇ ಕ್ಷೇತ್ರವನ್ನು ಕಡೆಗಣಿಸಿಲ್ಲ ಎಂದರು.
ಧಾರವಾಡದಲ್ಲಿ ನೂತನ ವಿಶ್ವವಿದ್ಯಾಲಯಕ್ಕೆ ಪೂಜೆ :
ಧಾರವಾಡದಲ್ಲಿಂದು ನೂತನ ಫಾರೆನ್ಸಿಕ್ ಯೂನಿವರ್ಸಿಟಿ ಸ್ಥಾಪನೆಗಾಗಿ ಭೂಮಿ ಪೂಜೆ ನೆರವೇರಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತಮ್ಮ ಸಹೋದ್ಯೋಗಿ ಸಚಿವ ಪ್ರಲ್ಲಾದ್ ಜೋಶಿ ಅವರ ಕಾರ್ಯವೈಖರಿಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು . ಧಾರವಾಡದಲ್ಲೇ ಗುಜರಾತ್ ಮಾದರಿಯ ಫಾರೆನ್ಸಿಕ್ ಯೂನಿವರ್ಸಿಟಿ ಕೊಡಬೇಕು ಎಂದು ಪ್ರಹ್ಲಾದ್ ಜೋಶಿಯವರು ನನ್ನ ಹಿಂದೆ ಬಿದ್ದುಬಿಟ್ಟಿದ್ದರು . ಸೂಕ್ತ ಜಾಗವಿಲ್ಲದೇ ಹೇಗೆ ಇದನ್ನ ಮಂಜೂರು ಮಾಡಲು ಸಾಧ್ಯ ಪ್ರಲ್ಲಾದ ಜೋಶಿಯವರೇ ? ಅಂತ ನಾನು ಪ್ರಶ್ನಿಸಿದ್ದೆ . ಆದರೆ ಪ್ರಲ್ಲಾದ್ ಜೋಶಿಯವರು ನಾನು ಜಾಗ ಕೇಳಿದ ಒಂದೇ ದಿನದಲ್ಲಿ 57 ಎಕರೆ ಜಾಗವನ್ನ ಗುರುತಿಸಿ ಕೊಟ್ಟರು . ಆಗ ಯೂನಿವರ್ಸಿಟಿ ಕೊಡದಿರಲು ನನ್ನ ಬಳಿ ಬೇರೆ ಯಾವುದೇ ಕಾರಣ ಉಳಿದಿರಲಿಲ್ಲ . ಈ ರೀತಿ ಕೇಂದ್ರ ಸಚಿವರಾಗಿ ಪ್ರಲ್ಲಾದ್ ಜೋಶಿ ಅವರು ಕಾರ್ಯ ನಿರ್ವಹಿಸುತ್ತಾರೆ . ನಾನು ಮತ್ತೇನು ಕಾರಣ ಹುಡುಕದೇ ಧಾರವಾಡಕ್ಕೆ ನೂತನ ವಿಶ್ವವಿದ್ಯಾಲಯ ನೀಡಲಾಗಿದೆ ಎಂದು ತಿಳಿಸಿದರು.