ಇಟಗಿ :
ಇಟಗಿ ಗ್ರಾಮದಲ್ಲಿ ವಿಶ್ವ ವಿಕಲಚೇತನರ ದಿನಾಚರಣೆ ಹಾಗೂ ವಿಕಲಚೇತನರ ವಿಶೇಷ ಗ್ರಾಮ ಸಭೆ ನಡೆಯಿತು.
ಗ್ರಾಪಂ ಅಭಿವೃದ್ದಿ ಅಧಿಕಾರಿ ವಿರೇಶ ಸಜ್ಜನ್ ಮಾತನಾಡಿ, ಗ್ರಾಪಂ ಮಟ್ಟದಲ್ಲಿ ಕ್ರಿಯಾ ಯೋಜನೆ ರೂಪಿಸಲು ವಿಕಲಚೇತನರ ಸಮನ್ವಯ ಗ್ರಾಮ ಸಭೆಗಳ ಮೂಲಕ ಅವರ ಕಲ್ಯಾಣ ಕಾರ್ಯಕ್ರಮಗಳನ್ನು ಪರಿಣಾಮಕಾರಿ ಅನುಷ್ಠಾನಗೊಳಿಸಲಾಗುವುದು. ಸರಕಾರ ಗ್ರಾಪಂಗಳಲ್ಲಿ ಪ್ರತಿ ವರ್ಷ ಡಿಸೆಂಬರ್ ತಿಂಗಳಲ್ಲಿ ವಿಕಲಚೇತನರ ಸಮನ್ವಯ ಗ್ರಾಮ ಸಭೆ ಆಯೋಜಿಸಿದೆ ಎಂದರು.
ಗ್ರಾಪಂ ಅಧ್ಯಕ್ಷೆ ಶಾಂತವ್ವ ಸುಣಗಾರ, ಕಾರ್ಯದರ್ಶಿ ಲಲಿತಾ ಪತ್ತಾರ, ಗ್ರಾಪಂ ಸದಸ್ಯರಾದ ವಿಠ್ಠಲ ಕಿಳೋಜಿ, ಬಾಳಪ್ಪ ಬೆಣಚಮರಡಿ, ಬಸವರಾಜ ತುರಮರಿ, ಭೀಮಪ್ಪ ಭೋವಿ, ಯಲ್ಲಪ್ಪ ಗೋಕಾವಿ, ಗ್ರಾಪಂ ಸಿಬ್ಬಂದಿ, ಹಾಗೂ ಇತರರು ಉಪಸ್ಥಿತರಿದ್ದರು.