ಹಿಂಡಲಗಾ ಜೈಲಿಂದ ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಪ್ರಾಣ ಬೆದರಿಕೆ ಕರೆ !
ಮೋದಿ ಸರ್ಕಾರದಲ್ಲಿ ನಿತಿನ್ ಗಡ್ಕರಿ ಅತ್ಯುತ್ತಮ ಕೆಲಸ ಮಾಡುವ ಮಂತ್ರಿಗಳಲ್ಲಿ ಒಬ್ಬರೆಂದು ಪರಿಗಣಿಸಲಾಗುತ್ತದೆ. ನಿತಿನ್ ಗಡ್ಕರಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ನಿತಿನ್ ಗಡ್ಕರಿ ಅವರು ಟ್ವಿಟರ್ನಲ್ಲಿ 12 ಮಿಲಿಯನ್ಗಿಂತಲೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ. ನಿತಿನ್ ಗಡ್ಕರಿ ಅವರಿಗೆ ಬೆದರಿಕೆ ಬಂದ ನಂತರ ಭಾರಿ ಸಂಚಲನ ಉಂಟಾಗಿದೆ. ಪೊಲೀಸರು ಆರೋಪಿಗಾಗಿ ಶೋಧ ನಡೆಸುತ್ತಿದ್ದಾರೆ.
ನಾಗಪುರದ ಖಮ್ಲಾ ಪ್ರದೇಶದಲ್ಲಿರುವ ಸಾರ್ವಜನಿಕ ಸಂಪರ್ಕ ಕಚೇರಿಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿ, ತಾನು ದಾವೂದ್ ಇಬ್ರಾಹಿಂ ತಂಡದ ಸದಸ್ಯನೆಂದು ಹೇಳಿಕೊಂಡು 100 ಕೋಟಿಗೆ ಬೇಡಿಕೆ ಇಟ್ಟಿದ್ದಾನೆ. ಗಡ್ಕರಿ ಅವರ ಕಚೇರಿ ಮತ್ತು ನಿವಾಸದ ಭದ್ರತೆ ಹೆಚ್ಚಿಸಲಾಗಿದೆ.
ಕರೆ ಮಾಡಿದಾತ ತನ್ನ ಮೊಬೈಲ್ ಸಂಖ್ಯೆ ಮತ್ತು ಕರ್ನಾಟಕದ ವಿಳಾಸ ಹಂಚಿಕೊಂಡಿದ್ದು, ಅಲ್ಲಿಗೆ ಹಣ ಕಳುಹಿಸುವಂತೆ ಹೇಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆತನನ್ನು ಪೊಲೀಸರು ಗುರುತಿಸಿದ್ದು, ಕರ್ನಾಟಕಕ್ಕೆ ಪೊಲೀಸ್ ತಂಡ ಕಳುಹಿಸಲಾಗಿದೆ.
ನಾಗಪುರ :
ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ಕುಖ್ಯಾತ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಹೆಸರಲ್ಲಿ ಜೀವ ಬೆದರಿಕೆ ಕರೆ ಹೋಗಿವೆ.
ಕರೆ ಮಾಡಿದ ವ್ಯಕ್ತಿ ಗಡ್ಕರಿ ಅವರನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಬೆಳಗಾವಿ ಹಿಂಡಲಗಾ ಜೈಲಿನಲ್ಲಿ ಇರುವ ಕೈದಿ ಜೈಲಲ್ಲಿ ಮೊಬೈಲ್ ಸಂಪರ್ಕ ಹೊಂದಿದ್ದು ಈ ಕೃತ್ಯ ಎಸಗಿದ್ದಾನೆ ಎಂದು ತಿಳಿದುಬಂದಿದೆ. ಈ ಬಗ್ಗೆ ಪೊಲೀಸರು ಪ್ರಾಥಮಿಕ ತನಿಖೆ ನಡೆಸಿದಾಗ ಈತ ಕೊಲೆ ಆರೋಪಿ ಎಂದು ದೃಢಪಟ್ಟಿದೆ.
ಗಡ್ಕರಿ ಅವರ ಸಾರ್ವಜನಿಕ ಸಂಪರ್ಕ ಕಚೇರಿಯ ಲ್ಯಾಂಡ್ ಲೈನ್ ದೂರವಾಣಿಗೆ ಶನಿವಾರ ಬೆಳಗ್ಗೆ 11:25, 11:32, 12:30 ಕ್ಕೆ 3 ಕರೆಗಳು ಹೋಗಿವೆ. ಕರೆ ಮಾಡಿದವ ದಾವೂದ್ ಗ್ಯಾಂಗ್ ನವನು ಎಂದು ಹೇಳಿಕೊಂಡಿದ್ದು ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ತಾನು ಕರ್ನಾಟಕದ ವ್ಯಕ್ತಿ ಎಂದು ಹೇಳಿ ಫೋನ್ ನಂಬರ್, ವಿಳಾಸ ತಿಳಿಸಿದ್ದಾನೆ.
ಈತನ ಬಂಧನಕ್ಕೆ ಮಹಾರಾಷ್ಟ್ರ ಪೊಲೀಸರು ಈಗ ಬೆಳಗಾವಿಗೆ ಆಗಮಿಸಿದ್ದು, ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಭದ್ರತೆ ಸಹ ಹೆಚ್ಚಿಸಲಾಗಿದೆ.