ಶಬರಿಮಲೆ :
ಶಬರಿಮಲೆಯಲ್ಲಿ ಇಂದು ಮಕರ ಜ್ಯೋತಿ ದರ್ಶನವಾಗಲಿದೆ. ಶಬರಿಮಲೆಯಲ್ಲಿ ಇಂದು ಸಂಜೆ ನಡೆಯುವ ಐತಿಹ್ಯವಾದ ಮಕರ ಜ್ಯೋತಿ ದರ್ಶನಕ್ಕೆ ಗಂಟೆ ಬಾಕಿಯಿದ್ದು , ಅಯ್ಯಪ್ಪ ಸನ್ನಿಧಾನಂ ಹಾಗೂ ಸುತ್ತಮುತ್ತ ಭಕ್ತ ಸಾಗರ ತುಂಬಿ ತುಳುಕುತ್ತಿದೆ. ಸಂಜೆ 6 ಗಂಟೆಗೆ ತಿರುವಾಭರಣದೊಂದಿಗೆ ದೀಪಾರಾಧನೆಯ ನಂತರ ಮಕರ ವಿಳಕ್ ( ಜ್ಯೋತಿ ) ಬೆಳಗಲಾಗುತ್ತದೆ. ಈ ಮಕರ ಜ್ಯೋತಿಯನ್ನು ಭಕ್ತರು 10 ಕ್ಕೂ ಹೆಚ್ಚು ಸ್ಥಳಗಳಿಂದ ನೋಡಬಹುದಾಗಿದೆ. ಭದ್ರತೆಗಾಗಿ ಪಂಪಾದಿಂದ ಸನ್ನಿಧಾನದವರೆಗೆ 2000 ಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ದೇವಳದ ಆಡಳಿತ ಮಂಡಳಿ ತಿಳಿಸಿದೆ.