ಹುಬ್ಬಳ್ಳಿ :
ಹುಬ್ಬಳ್ಳಿಯಲ್ಲಿ ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರ ರೋಡ್ ಶೋ ವೇಳೆ ಬಾಲಕ ಮೋದಿಯವರಿಗೆ ಹೂವಿನ ಹಾರ ಹಾಕಲು ಭದ್ರತೆ ಭೇದಿಸಿ ಹೋಗಿದ್ದ. ಈ ಬಗ್ಗೆ ಆತ ಇಂದು ಪ್ರತಿಕ್ರಿಯೆ ನೀಡಿದ್ದಾನೆ. ಪ್ರಧಾನಿ ನರೇಂದ್ರ ಮೋದಿ ಎಂದರೆ ನನಗೆ ಬಹಳ ಇಷ್ಟ. ಆ ಕಾರಣದಿಂದ ಅವರಿಗೆ ಹಾರ ಹಾಕಲು ಹೋಗಿದ್ದೆ. ನಾನು ಅವರ ಎಡಗೈ ಮುಟ್ಟಿದ್ದೇನೆ. ಅವರ ಜೊತೆ ಮಾತನಾಡಬೇಕೆಂಬ ಆಸೆ ಇದೆ ಎಂದು ಹೇಳಿದ್ದಾನೆ. ಆರನೇ ತರಗತಿಯ ವಿದ್ಯಾರ್ಥಿಯಾಗಿರುವ ಕುನಾಲ್, ಎರಡು ವರ್ಷಗಳ ಹಿಂದೆ ಧಾರವಾಡಕ್ಕೆ ಬಂದಾಗ ನನ್ನ ತಂದೆಯ ಜೊತೆ ಹೋಗಿ ಮೋದಿಯವರನ್ನು ನೋಡಿದ್ದೇನೆ. ಮೋದಿ ಎಂದರೆ ನನಗೆ ಬಹಳ ಇಷ್ಟ ಎಂದು ಪ್ರತಿಕ್ರಿಯಿಸಿದ್ದಾನೆ