ಬೆಳಗಾವಿ : 2.4.2026 ರಂದು ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಜರುಗಿದ ಕನ್ನಡ ಜಾಗ್ರತಿ ಸಮಿತಿಯ ಸಭೆಯಲ್ಲಿ ಕನ್ನಡ ಭವನದ ವಿಷಯ ಮತ್ತು ಪಾಲಿಕೆಯ ಸಭೆಯಲ್ಲಿ ಕರ್ನಾಟಕ ಪರವಾದ ನಿರ್ಣಯಗಳನ್ನು
ಅಂಗೀಕರಿಸಬೇಕೆಂಬ ಕನ್ನಡ ಸಂಘಟನೆಗಳ
ಒತ್ತಾಯದ ಬಗ್ಗೆ ಚರ್ಚೆಯಾಗಿದೆ.
ಸಮಿತಿಯ ಸದಸ್ಯ ರಾಜಶೇಖರ ತಳವಾರ ಅವರು ಈ ನಿರ್ಣಯಗಳನ್ನು
ಸಭೆಯಲ್ಲಿ ಮಂಡಿಸಿದ್ದಾರೆ. ಪಾಲಿಕೆಯ ಜಾಗೆಯಲ್ಲಿ, ರಾಜ್ಯ ಸರಕಾರದ ಅನುದಾನದಲ್ಲಿ ನೆಹರೂ ನಗರದಲ್ಲಿ
ನಿರ್ಮಿಸಿದ ಕನ್ನಡ ಭವನವನ್ನು ಸರಕಾರದ ವಶಕ್ಕೆ ತೆಗೆದುಕೊಳ್ಳುವ ಸಂಬಂಧ ಮುಂದಿನ ಕ್ರಮ ಕೈಕೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಪಾಲಿಕೆಯ ಸಭೆಯಲ್ಲಿ ಕರ್ನಾಟಕ ಪರವಾಗಿ ಗೊತ್ತುವಳಿಗಳನ್ನು ಅಂಗೀಕರಿಸಲು
ಮಹಾಪೌರರನ್ನು ವಿನಂತಿಸಲು ಸಭೆ ನಿರ್ಧರಿಸಿದೆ.


