ಖಾನಾಪುರ : ಖಾನಾಪುರ ತಾಲೂಕಿನ ಚಿಕ್ಕದಿನ್ನಕೊಪ್ಪ ಸರ್ಕಾರಿ ಪ್ರೌಢಶಾಲೆಗೆ ಭೇಟಿ ನೀಡಿ ಮಹತ್ವದ ಅಭಿವೃದ್ಧಿ ಕಾರ್ಯಕ್ರಮ ನೆರವೇರಿಸಲಾಯಿತು.
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಶಿಫಾರಸ್ಸಿನ ಮೇರೆಗೆ, ಕೇಂದ್ರ ಸರ್ಕಾರದ ಸಾರ್ವಜನಿಕ ಸ್ವಾಮ್ಯದ ಸಂಸ್ಥೆಯಾದ ಒಎನ್ ಜಿಸಿಯ ಸಿಎಸ್ ಆರ್ ನಿಧಿಯಡಿ ‘ಜನಶ್ರೀಧಾನ್ ಫೌಂಡೇಶನ್’ ವತಿಯಿಂದ ಒದಗಿಸಲಾದ ಸ್ಮಾರ್ಟ್ ಬೋರ್ಡ್ ಹಾಗೂ 5 ಕೆಡಬ್ಲು ಸೌರ ವಿದ್ಯುತ್ ಉಪಕರಣಗಳನ್ನು ಶಾಲೆಯಲ್ಲಿ ಲೋಕಾರ್ಪಣೆ ಮಾಡಲಾಯಿತು.
ಖಾನಾಪುರ ತಾಲೂಕಿನ ಆಯ್ದ ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ ‘ಶಿಕ್ಷಾ ಟ್ಯಾಬ್’ಗಳನ್ನು ವಿತರಿಸಲಾಯಿತು, ಇದರಿಂದ ಗ್ರಾಮೀಣ ವಿದ್ಯಾರ್ಥಿಗಳಿಗೆ ಡಿಜಿಟಲ್ ಶಿಕ್ಷಣದ ಹೊಸ ಅವಕಾಶಗಳು ಲಭ್ಯವಾಗಲಿವೆ.
ಶಾಸಕ ವಿಠ್ಠಲ ಹಲಗೇಕರ್, ಮಾಜಿ ಶಾಸಕ ಅರವಿಂದ ಪಾಟೀಲ, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಪ್ರಮೋದ ಕೊಚೇರಿ, ಉಪಾಧ್ಯಕ್ಷರು ಹಾಗೂ ಹಲವಾರು ಗಣ್ಯರು ಉಪಸ್ಥಿತರಿದ್ದರು.


