ಬೆಂಗಳೂರು : ಬ್ಯಾಟರ್ಗಳ ಸ್ಫೋಟಕ ಆಟದ ನೆರವಿನಿಂದ ಸಿಎಸ್ಕೆ ವಿರುದ್ಧದ ಪಂದ್ಯವನ್ನು ಆರ್ಸಿಬಿ ತಂಡವು 43 ರನ್ಗಳಿಂದ ಗೆದ್ದು, ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.
ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಟಾಸ್ ಗೆದ್ದ ಸಿಎಸ್ಕೆ ನಾಯಕ ಋತುರಾಜ್ ಗಾಯಕವಾಡ್ ಬೌಲಿಂಗ್ ಮಾಡಲು ನಿರ್ಧರಿಸಿದರು.
ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಆರ್ಸಿಬಿ ತಂಡಕ್ಕೆ ವಿರಾಟ್ ಕೊಹ್ಲಿ (28) ಹಾಗೂ ಫಿಲಿಪ್ ಸಾಲ್ಟ್ (46) ಉತ್ತಮ ಆರಂಭ ಒದಿಗಿಸಿದರು.
ಪಡಿಕ್ಕಲ್ ಅರ್ಧಶತಕ–ಪಾಟಿದಾರ್ ಸ್ಫೋಟಕ ಬ್ಯಾಟಿಂಗ್
ಫಿಲಿಪ್ ಸಾಲ್ಟ್ ಔಟ್ ಆಗುತ್ತಿದ್ದಂತೆ ಜೊತೆಯಾದ ಕನ್ನಡಿಗ ಪಡಿಕ್ಕಲ್ ಹಾಗೂ ನಾಯಕ ರಜತ್ ಪಾಟಿದಾರ್ ಸಿಎಸ್ಕೆ ಬೌಲರ್ಗಳ ಮೇಲೆ ಸವಾರಿ ಮಾಡಿದರು. ಪಡಿಕ್ಕಲ್ ಅರ್ಧಶತಕ ಸಿಡಿಸಿದರೆ, ಪಾಟಿದಾರ್ ಸ್ಫೋಟಕ 48 ರನ್ ಕಲೆ ಹಾಕಿದರು.
ಸಿಎಸ್ಕೆ ಬೆವರಿಳಿಸಿದ ಟಿಮ್
ಚಿನ್ನಸ್ವಾಮಿ ಮೈದಾನದಲ್ಲಿ ಅಬ್ಬರಿಸಿದ ಟಿಮ್ ಡೇವಿಡ್ ಬೌಂಡರಿ–ಸಿಕ್ಸರ್ಗಳ ಸುರಿಮಳೆ ಸುರಿಸಿದರು. ಅವರು ಕೇವಲ 25 ಎಸೆತಗಳಲ್ಲಿ 3 ಬೌಂಡರಿ, 8 ಸಿಕ್ಸರ್ ನೆರವಿನಿಂದ 70 ರನ್ ಬಾರಿಸಿದರು.
ಸಿಎಸ್ಕೆಗೆ ಆರಂಭಿಕ ಆಘಾತ
251 ರನ್ಗಳ ಬೃಹತ್ ಗುರಿ ಬೆನ್ನಟ್ಟಿದ ಸಿಎಸ್ಕೆ ತಂಡಕ್ಕೆ ಆರಂಭಿಕ ಆಘಾತ ಎದುರಾಯಿತು. ಸಂಜು ಸ್ಯಾಮ್ಸನ್ ಹಾಗೂ ನಾಯಕ ಗಾಯಕವಾಡ್ ಹಾಗೂ ಆಯುಷ್ ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್ ಸೇರಿಕೊಂಡರು.
ಸರ್ಫರಾಜ್ ಹೋರಾಟ
ಆರಂಭಿಕ ಆಘಾತದ ಹೊರತಾಗಿಯೂ ಉತ್ತಮ ಬ್ಯಾಟಿಂಗ್ ನಡೆಸಿದ ಸರ್ಫರಾಜ್ ಖಾನ್ ಸ್ಫೋಟಕ ಅರ್ಧಶತಕ ಸಿಡಿಸಿ ಮಿಂಚದರು. ಅವರು ಕೇವಲ 25 ಎಸೆತಗಳಲ್ಲಿ 50 ರನ್ ಸಿಡಿಸಿ ಕೃನಾಲ್ ಪಾಂಡ್ಯಗೆ ವಿಕೆಟ್ ಒಪ್ಪಿಸಿದರು.
ಕೊನೆಯಲ್ಲಿ ಪ್ರಶಾಂತ್ ವೀರ್, ಜೆಮಿ ಓವರ್ಟನ್ ಹೋರಾಟ ನಡೆಸಿದರಾದರು, ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಸಿಎಸ್ಕೆ 19.4 ಓವರ್ಗಳಲ್ಲಿ 207 ರನ್ಗಳಿ ಆಲೌಟ್ ಆಗಿ 43 ರನ್ಗಳ ಸೋಲು ಅನುಭವಿಸಿತು.


