ಬೆಳಗಾವಿ: ಇಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಆನ್ವಯಿಕ ವಿಜ್ಞಾನ (ಭೌತಶಾಸ್ತ್ರ) ವಿಭಾಗಕ್ಕೆ ಲಾವಣ್ಯ ಗುಂಜಾಳ ಅವರು ಸಲ್ಲಿಸಿದ “ಸಿಂಥೆಸಿಸ್ ಆ್ಯಂಡ್ ಕ್ಯಾರೆಕ್ಟರೈಸೇಶನ್ ಆಫ್ ಕಾಂಜುಗೇಟೆಡ್ ಪಾಲಿಮರ್ಸ್ ಆ್ಯಂಡ್ ದೇರ್ ಅಪ್ಲಿಕೇಶನ್ಸ್ ಫಾರ್ ಸೆನ್ಸಾರ್ಸ್” ಎಂಬ ಮಹಾಪ್ರಬಂಧಕ್ಕೆ ವಿಶ್ವವಿದ್ಯಾಲಯವು ಪಿಎಚ್ಡಿ ಪದವಿ ನೀಡಿದೆ.
ಇವರು ಪ್ರಸ್ತುತ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಭೌತಶಾಸ್ತ್ರ ವಿಭಾಗದಲ್ಲಿ ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇವರಿಗೆ ಬಳ್ಳಾರಿಯ ಆರ್.ವೈ.ಎಂ. ತಾಂತ್ರಿಕ ಮಹಾವಿದ್ಯಾಲಯದ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರು ಮತ್ತು ಪ್ರಾಧ್ಯಾಪಕರಾದ ಪ್ರೊ. ನಾಗಭೂಷಣ ಎನ್. ಎಮ್. ಹಾಗೂ ಬಳ್ಳಾರಿಯ ಕಿಷ್ಕಿಂಧ ವಿಶ್ವವಿದ್ಯಾಲಯದ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರು, ಸಂಶೋಧನೆ ಮತ್ತು ಆವಿಷ್ಕಾರದ ಡೀನ್ ಹಾಗೂ ಪ್ರಾಧ್ಯಾಪಕರಾದ ಪ್ರೊ. ಮಂಜುನಾಥ ಎಸ್ ಅವರು ಮಾರ್ಗದರ್ಶನ ಮಾಡಿದರು.


