ಬೆಳಗಾವಿ:ಸಾಹಿತಿಗಳಾದ ಕಿರಣ ಕ .ಗಣಾಚಾರಿ ಅವರ ‘ಬೆಳಕಿನ ಹೊಳೆಯ ಪ್ರವಾಹ’ ಕೃತಿಗೆ ಸಾಹಿತ್ಯ ಸೌರಭ ಪೌಂಡೇಶನ್ ಕೊಡಮಾಡುವ 2025 ನೇ ಸಾಲಿನ “ಶಿಭಾ ಕಾವ್ಯ ಪುರಸ್ಕಾರ” ದೊರೆತಿದೆ ಎಂದು ಅಧ್ಯಕ್ಷ ಶಿವಾನಂದ ಭಾಗಾಯಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಶಸ್ತಿಯು ಸ್ಮರಣಿಕೆ, ಪ್ರಶಸ್ತಿ ಪತ್ರ ಹಾಗೂ ಪುಸ್ತಕಗಳನ್ನು ಒಳಗೊಂಡಿದ್ದು, ಮೆ 1 ರಂದು ಬೆಳಗಾವಿಯ ಕನ್ನಡ ಭವನದಲ್ಲಿ ನಡೆಯುವ ಪೌಂಡೇಶನ್ ನ 2 ನೇ ವರ್ಷದ ವಾರ್ಷಿಕೋತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ತಿಳಿಸಲಾಗಿದೆ.
ಕಿರಣ ಗಣಾಚಾರಿ ಅವರು ಮೂಲತ: ಖಾನಾಪೂರ ತಾಲೂಕಿನ ಇಟಗಿ ಗ್ರಾಮದವರಾಗಿದ್ದು ಕಲ್ಪನಾ ಛಾಯೆಯಲಿ, ಕಿರು ನಗೆ, ಬೆಳಕಿನ ಹೊಳೆಯ ಪ್ರವಾಹ ಎಂಬ ಪುಸ್ತಕಗಳನ್ನು ಪ್ರಕಟಿಸಿರುತ್ತಾರೆ. ಶ್ರೀಯುತರು ‘ಸುವರ್ಣ ಕರ್ನಾಟಕ ಕಣ್ಮಣಿ’ ರಾಜ್ಯ ಪ್ರಶಸ್ತಿಗೆ ಭಾಜನರಾಗಿದ್ದು ಕಥೆ, ಅಂಕಣ ಬರಹ,ವಿಮರ್ಶಾ ಲೇಖನಗಳು, ಕವನ, ಚುಟುಕು -ಹನಿಗವನಗಳು,ಆಧುನಿಕ ವಚನಗಳು ಮುಂತಾದ ಸಾಹಿತ್ಯ ಪ್ರಕಾರಗಳಲ್ಲಿ ಸಾಹಿತ್ಯ ಕೃಷಿಯಲ್ಲಿ ತೊಡಗಿರುತ್ತಾರೆ. ಮೈಸೂರು ದಸರಾ ಕವಿಗೋಷ್ಠಿಯನ್ನೊಳಗೊಂಡು ಹಲವಾರು ರಾಜ್ಯಮಟ್ಟದ ಗೋಷ್ಠಿಗಳಲ್ಲಿ ಭಾಗವಹಿಸುತ್ತಿದ್ದು ಆಕಾಶವಾಣಿ ಧಾರವಾಡ ಹಾಗೂ ನಮ್ಮೂರ ಬಾನುಲಿ ಬೆಳಗಾವಿಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ನೀಡಿರುತ್ತಾರೆ.


