ಬೆಳಗಾವಿ: ಟಿಪ್ಪರ ಹರಿದು ಪಾಲಿಕೆ ಪೌರಕಾರ್ಮಿಕೆ ಸಾವನ್ನಪ್ಪಿರುವ ಘಟನೆ ಅನಗೋಳ ನಾಕಾ ಬಳಿ ಶುಕ್ರವಾರ ಬೆಳಿಗ್ಗೆ ನಡೆದಿದೆ.
ಅವ್ವಕ್ಕ ಕೋಲಕಾರ ಸಾವನ್ನಪ್ಪಿರುವ ಪಾಲಿಕೆ ಪೌರಕಾರ್ಮಿಕಿ. ಮಾಹಿತಿಯ ಪ್ರಕಾರ, ಅವ್ವಕ್ಕ ಕೋಲಕಾರ ಅವರು ಎಂದಿನಂತೆ ಬೆಳಿಗ್ಗೆ ಸ್ವಚ್ಚತಾ ಕಾರ್ಯದಲ್ಲಿ ನಿರತರಾಗಿದ್ದಾಗ ವೇಗವಾಗಿ ಬಂದ ವಾಹನ ಡಿಕ್ಕಿ ಹೊಡೆದಿದ್ದರಿಂದ ಕರ್ತವ್ಯದಲ್ಲಿದ್ದ ಮಹಿಳಾ ಪೌರಕಾರ್ಮಿಕಿ ಸಾವನ್ನಪ್ಪಿದ್ದಾರೆ. ಅಪಘಾತದ ಬಳಿಕ ಪರಾರಿಯಾಗಿದ್ದ ವಾಹನ ಹಾಗೂ ಚಾಲಕನನ್ನು ಪೊಲೀಸರು ಪತ್ತೆಹಚ್ಚಿ ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಚಾಲಕನ ನಿರ್ಲಕ್ಷ್ಯದ ಅಂಶಗಳ ಕುರಿತು ತನಿಖೆ ಮುಂದುವರಿಸಿದ್ದಾರೆ.


