ಬೆಳಗಾವಿ: ‘ದಿ ಫರ್ನ್ ಹೋಟೆಲ್ಸ್ ಅಂಡ್ ರೆಸಾರ್ಟ್ಸ್’ ಸಂಸ್ಥೆಯು ಬೆಳಗಾವಿಯಲ್ಲಿ ‘ರಾಜಪಥ್ ಬೀಕನ್ ಹೋಟೆಲ್’ ಅನ್ನು ಪ್ರಾರಂಭಿಸುವ ಮೂಲಕ ತನ್ನ ವ್ಯಾಪ್ತಿಯನ್ನು ವಿಸ್ತರಿಸಿದೆ. ನಗರದ ಹೃದಯಭಾಗದಲ್ಲಿರುವ ಈ ಹೋಟೆಲ್, ಬೆಳಗಾವಿಗೆ ಭೇಟಿ ನೀಡುವ ವ್ಯಾಪಾರಸ್ಥರು ಮತ್ತು ಪ್ರವಾಸಿಗರ ಹೆಚ್ಚುತ್ತಿರುವ ಅಗತ್ಯಗಳನ್ನು ಪೂರೈಸುವ ನಿಟ್ಟಿನಲ್ಲಿ ವಿನ್ಯಾಸಗೊಳಿಸಲಾಗಿದೆ.
ಈ ಹೋಟೆಲ್ ಹಂಸ ಟಾಕೀಸ್ ರಸ್ತೆಯ ಚಿತ್ರಾ ಟಾಕೀಸ್ ಪಕ್ಕದಲ್ಲಿದೆ. ಇದು ಬೆಳಗಾವಿಯ ಪ್ರಮುಖ ಶಾಪಿಂಗ್ ಪ್ರದೇಶಗಳು, ವಾಣಿಜ್ಯ ಕೇಂದ್ರಗಳು ಮತ್ತು ಸಾರಿಗೆ ಸಾರಿಗೆ ಸೌಲಭ್ಯಗಳಿಗೆ ಸೌಲಭ್ಯಗಳಿಗೆ ಸುಲಭ ಪ್ರವೇಶವನ್ನು ಒದಗಿಸುತ್ತದೆ. ಈ ಹೊಸ ಸೇರ್ಪಡೆಯೊಂದಿಗೆ ಫರ್ನ್ ಗ್ರೂಪ್ ನಗರದಲ್ಲಿ ತನ್ನ ಅತಿಥ್ಯ ಜಾಲವನ್ನು ಮತ್ತಷ್ಟು ಬಲಪಡಿಸಿದೆ; ಈಗಾಗಲೇ ಬೆಳಗಾವಿಯಲ್ಲಿ ಈ ಸಂಸ್ಥೆಯು ‘UK27 ದಿ ಫರ್ನ್ ಬೆಳಗಾವಿ’ ಹೋಟೆಲ್ ಅನ್ನು ಯಶಸ್ವಿಯಾಗಿ ನಡೆಸುತ್ತಿದೆ.
ರಾಜಪಥ್ ಬೀಕನ್ ಹೋಟೆಲ್ 35 ಸುಂದರ ವಿನ್ಯಾಸದ ರೂಮ್ಸ್ ಗಳು ಮತ್ತು ಸೂಟ್ಗಳನ್ನು ಹೊಂದಿದ್ದು, ಅತಿಥಿಗಳಿಗೆ ಆರಾಮದಾಯಕ ವಾಸ್ತವ್ಯದ ಅನುಭವ ನೀಡುತ್ತದೆ. ಹೋಟೆಲ್ನಲ್ಲಿ ‘ಪಕ್ವಾನ್’ ಎಂಬ ಶುದ್ಧ ಸಸ್ಯಾಹಾರಿ ರೆಸ್ಟೋರೆಂಟ್ ಇದ್ದು, ಇಲ್ಲಿ ಉಪಾಹಾರ, ಮಧ್ಯಾಹ್ನದ ಊಟ ಮತ್ತು ರಾತ್ರಿಯ ಊಟದ ಜೊತೆಗೆ ವಿವಿಧ ತಿಂಡಿ ತಿನಿಸುಗಳು” ಲಭ್ಯವಿರುತ್ತವೆ. ಅತಿಥಿಗಳಿಗಾಗಿ ರೂಮಲ್ಲೇ ಊಟದ ಸೌಲಭ್ಯವೂ ಲಭ್ಯವಿದೆ.
ವ್ಯಾಪಾರ, ಪ್ರವಾಸೋದ್ಯಮ ಅಥವಾ ವೈಯಕ್ತಿಕ ಕೆಲಸಗಳಿಗಾಗಿ ಬೆಳಗಾವಿಗೆ ಬರುವ ಪ್ರಯಾಣಿಕರಿಗೆ ನಂಬಿಕಸ್ತ ಸೇವೆ ಮತ್ತು ಸುಖಕರ ವಾಸ್ತವ್ಯವನ್ನು ನೀಡುವುದು ಹೋಟೆಲ್ನ ಉದ್ದೇಶವಾಗಿದೆ. ಅತಿಥಿಗಳ ವಿನಂತಿಯ ಮೇರೆಗೆ ವಿಮಾನ ನಿಲ್ದಾಣ ಮತ್ತು ರೈಲ್ವೆ ನಿಲ್ದಾಣದ ಸಾರಿಗೆ ವ್ಯವಸ್ಥೆ ಹಾಗೂ ಸ್ಥಳೀಯ ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆಯ ಸೌಲಭ್ಯವನ್ನೂ ಒದಗಿಸಲಾಗುತ್ತದೆ. ಅತಿಥಿಗಳು ದಿನವಿಡೀ ತೆರೆದಿರುವ ಆಧುನಿಕ ರೆಸ್ಟೋರೆಂಟ್ನಲ್ಲಿ ವಿವಿಧ ಬಗೆಯ ಖಾದ್ಯಗಳನ್ನು ಆಸ್ವಾದಿಸಬಹುದು, ಇದು ಸಾಮಾಜಿಕ ಕೂಟಗಳಿಗೆ ಪೂರಕವಾದ ವಾತಾವರಣವನ್ನು ಹೊಂದಿದೆ.
ಬೆಳಗಾವಿಯಂತಹ ನಗರಗಳು ವ್ಯಾಪಾರ, ವಾಣಿಜ್ಯ ಮತ್ತು ಪ್ರಾದೇಶಿಕ ಚಲನಶೀಲತೆಯ ಪ್ರಮುಖ ಕೇಂದ್ರಗಳಾಗಿ ಹೊರಹೊಮ್ಮುತ್ತಿವೆ. ಆದ್ದರಿಂದಲೇ ನಗರಕ್ಕೆ ಬರುವ ಸಂದರ್ಶಕರಿಗೆ ಆರಾಮದಾಯಕ ಮತ್ತು ಅನುಕೂಲಕರ ವಾಸ್ತವ್ಯದ ಅನುಭವ ನೀಡಲು ಈ ಹೋಟೆಲ್ ಅನ್ನು ಯೋಜಿಸಲಾಗಿದೆ.
ರಾಜಪಥ್ ಬೀಕನ್ ಹೋಟೆಲ್ ಪ್ರಾರಂಭದೊಂದಿಗೆ, ‘ದಿ ಫರ್ನ್ ಹೋಟೆಲ್ಸ್ ಅಂಡ್ ರೆಸಾರ್ಟ್ಸ್’ ಕರ್ನಾಟಕದಲ್ಲಿ ತನ್ನ ವಿಸ್ತರಣೆಯನ್ನು ಮುಂದುವರಿಸಿದೆ. ಬೆಳೆಯುತ್ತಿರುವ ನಗರಗಳಲ್ಲಿ ತನ್ನ ಅಸ್ತಿತ್ವವನ್ನು ಬಲಪಡಿಸುವ ಮೂಲಕ ಪ್ರಯಾಣಿಕರಿಗೆ ಗುಣಮಟ್ಟದ ಅತಿಥ್ಯ ಸೇವೆಗಳನ್ನು ನೀಡಲು ಸಂಸ್ಥೆ ಬದ್ಧವಾಗಿದೆ.
The Fern Hotels expands presence in Belagavi with Rajpath Beacon Hotel
Belagavi, March 2026: The Fern Hotels & Resorts has expanded its presence in Belagavi with the upcoming opening of Rajpath Beacon Hotel Belagavi, a centrally located hotel designed to serve the growing needs of business and leisure travellers visiting the city.
The hotel is situated beside Chitra Talkies on Huns Talkies Road, providing easy access to major shopping areas, business hubs and transport facilities in Belagavi. With this addition, The Fern group further strengthens its hospitality network in the city where it already operates UK27 The Fern Belagavi.
Rajpath Beacon Hotel Belagavi features 35 aesthetically designed rooms and suites to offer comfortable and convenient stay for guests. The hotel also houses Pakwan, a pure vegetarian restaurant serving breakfast, lunch and dinner along with a range of snacks and refreshments. In-room dining facilities are also available for guests.
The hotel aims to provide reliable service and a comfortable stay for travellers visiting Belagavi for business, tourism or personal purposes. Additional guest services include arrangements for airport and railway station transfers, as well as local sightseeing, available on request. Guests will also enjoy a contemporary all-day dining restaurant serving a
variety of cuisines in a welcoming ambiance, providing the perfect setting for both casual meals and social gatherings.
Cities like Belagavi are emerging as important centres for business, trade and regional mobility & that the new hotel has been planned to offer a comfortable and convenient stay experience for visitors coming to the city.
With the opening of Rajpath Beacon Hotel Belagavi, The Fern Hotels & Resorts continues its expansion in Karnataka, strengthening its presence in emerging cities and providing quality hospitality services to travellers.


