ಬೆಳಗಾವಿ : ಅಕ್ಕ ತಂಗೇರಹಾಳದ ಹಿರಿಯ ಗಣ್ಯರು, ಅಡವಿ ಸಿದ್ದೇಶ್ವರ ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯರು ಆಗಿದ್ದ ಬಿ. ಎಲ್. ಪಾಟೀಲ ಇಂದು ನಿಧನರಾದರು.
ಕಳೆದ 30 ವರ್ಷಗಳಿಂದ ರಾಜ್ಯಶಾಸ್ತ್ರ ಉಪನ್ಯಾಸಕರಾಗಿ , ಪ್ರಾಚಾರ್ಯರಾಗಿ ಸೇವೆಗೈದಿದ್ದಾರೆ
ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ಅಕ್ಕತಂಗೇರಹಾಳದಲ್ಲಿ ಮಧ್ಯಾಹ್ನ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.


