ಬೆಳಗಾವಿ : ಗೋಕಾಕದ ನಿಖಿಲ್ ಓಸ್ವಾಲ್ ಅವರಿಗೆ ಬಿಜೆಪಿಯ ಮಹತ್ವದ ಹುದ್ದೆ ಒಲಿದು ಬಂದಿದೆ. ಬಿಜೆಪಿ ಬೆಳಗಾವಿ ಗ್ರಾಮಾಂತರ ಜಿಲ್ಲೆಯ ಸಂಚಾಲಕರಾಗಿ ಆಯ್ಕೆ ಮಾಡಲಾಗಿದೆ. ಬೆಳಗಾವಿ ಬಿಜೆಪಿ ಗ್ರಾಮಾಂತರ ಜಿಲ್ಲೆಯ ವಿವಿಧ ಪ್ರಕೋಷ್ಠಗಳ ಸಹ ಸಂಚಾಲಕರಾಗಿ ಗೋಕಾಕದ ಯುವ ಮುಖವಾಗಿರುವ ನಿಖಿಲ್ ಅಶೋಕ ಓಸ್ವಾಲ್ ಹೊಸ ಅವರನ್ನು ನೇಮಕ ಮಾಡಲಾಗಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಈ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ನಿಖಿಲ್ ಅವರು ಬಿಜೆಪಿಯ ಸಂಘಟನೆಯಲ್ಲಿ ಮೊದಲಿನಿಂದಲೂ ಸಕ್ರಿಯರಾಗಿ ತೊಡಗಿಸಿಕೊಂಡವರು. ಪಕ್ಷದ ಕೆಲಸ ಕಾರ್ಯಗಳಲ್ಲಿ ಅತ್ಯಂತ ಚುರುಕಿನಿಂದ ತೊಡಗಿಸಿಕೊಂಡ ಕ್ರಿಯಾಶೀಲ ವ್ಯಕ್ತಿತ್ವದ ಅವರಿಗೆ ಕೊನೆಗೂ ಪಕ್ಷದ ಮಹತ್ವದ ಜವಾಬ್ದಾರಿಯನ್ನು ವಹಿಸಲಾಗಿದೆ.


