ಕ್ಯಾಲಿಫೋರ್ನಿಯಾ: ಆಲ್ಫಾಬೆಟ್ ಇಂಕ್ನ (Alphabet Inc) ಒಡೆತನದ ಗೂಗಲ್ ಸಂಸ್ಥೆಯು ತನ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಸುಂದರ ಪಿಚೈ ಅವರ ವೇತನವನ್ನು ಮುಂದಿನ ಮೂರು ವರ್ಷಗಳ ಅವಧಿಗೆ ಬರೋಬ್ಬರಿ 692 ಮಿಲಿಯನ್ ಡಾಲರ್ (63,61,79,82,000 ರೂ.) ವರೆಗೆ ಅಂದರೆ ಸುಮಾರು 6,361 ಕೋಟಿ ರೂಪಾಯಿ ಹೆಚ್ಚಿಸಿದೆ.
ಈ ಭಾರಿ ಮೊತ್ತದೊಂದಿಗೆ ಪಿಚೈ ಅವರು ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಲ್ಲಿ ಒಬ್ಬರಾಗಿದ್ದಾರೆ ಎಂದು ‘ಫೈನಾನ್ಷಿಯಲ್ ಟೈಮ್ಸ್’ ವರದಿ ಮಾಡಿದೆ.
ಒಟ್ಟು ಪ್ಯಾಕೇಜ್ನಲ್ಲಿ ಹೆಚ್ಚಿನ ಭಾಗವು ಕಂಪನಿಯ ಸಾಧನೆಯ ಆಧಾರದ ಮೇಲೆ ನೀಡಲಾಗುವ ಷೇರು ಯುನಿಟ್ಗಳಿಂದ (PSUs) ಕೂಡಿದೆ. ಇದರ ಮೌಲ್ಯ 126 ಮಿಲಿಯನ್ ಡಾಲರ್ ಆಗಿದ್ದು, ಕಂಪನಿಯು ಉತ್ತಮ ಲಾಭ ಗಳಿಸಿದರೆ ಇದು 252 ಮಿಲಿಯನ್ ಡಾಲರ್ಗೆ ಏರಿಕೆಯಾಗಬಹುದು. ಸುಂದರ್ ಪಿಚೈ ಅವರ ವಾರ್ಷಿಕ ಮೂಲ ವೇತನ 2 ಮಿಲಿಯನ್ ಡಾಲರ್ (ಅಂದಾಜು 18 ಕೋಟಿ ರೂ.) ಆಗಿರಲಿದೆ.
ಹೊಸ ಪ್ರೋತ್ಸಾಹಕಗಳು: ಅಲ್ಫಾಬೆಟ್ನ ಸ್ವಯಂಚಾಲಿತ ವಾಹನ ಸಂಸ್ಥೆಗಳಾದ Waymo ಮತ್ತು Wing Aviation ನ ಬೆಳವಣಿಗೆಯ ಆಧಾರದ ಮೇಲೆ 350 ಮಿಲಿಯನ್ ಡಾಲರ್ ವರೆಗಿನ ಹೆಚ್ಚುವರಿ ಷೇರು ಸೌಲಭ್ಯಗಳನ್ನು ನೀಡಲಾಗಿದೆ.
ಪ್ರಸ್ತುತ ಪಿಚೈ ಮತ್ತು ಅವರ ಪತ್ನಿ ಅಂಜಲಿ ಅವರು ಗೂಗಲ್ನಲ್ಲಿ ಹೊಂದಿರುವ ಷೇರುಗಳ ಒಟ್ಟು ಮೌಲ್ಯ ಸುಮಾರು 498 ಮಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದೆ.
ಪಿಚೈ ನಾಯಕತ್ವದಲ್ಲಿ ಗೂಗಲ್ ಸಾಧನೆ:
2015 ರಲ್ಲಿ ಸಿಇಒ ಆಗಿ ಅಧಿಕಾರ ವಹಿಸಿಕೊಂಡ ನಂತರ, ಭಾರತದ ಮೂಲದ ಸುಂದರ ಪಿಚೈ ಅವರ ನೇತೃತ್ವದಲ್ಲಿ ಗೂಗಲ್ನ ಮಾರುಕಟ್ಟೆ ಮೌಲ್ಯವು ಸುಮಾರು ಏಳು ಪಟ್ಟು ಹೆಚ್ಚಾಗಿದೆ. 535 ಬಿಲಿಯನ್ ಡಾಲರ್ನಷ್ಟಿದ್ದ ಕಂಪನಿಯ ಮೌಲ್ಯವು ಪ್ರಸ್ತುತ 3.6 ಟ್ರಿಲಿಯನ್ ಡಾಲರ್ (ಸುಮಾರು 300 ಲಕ್ಷ ಕೋಟಿ ರೂ.) ಗೆ ತಲುಪಿದೆ. ಈ ವರ್ಷದ ಜನವರಿಯಲ್ಲಿ ಇದು 4 ಟ್ರಿಲಿಯನ್ ಡಾಲರ್ ಗಡಿ ದಾಟಿ ಇತಿಹಾಸ ಸೃಷ್ಟಿಸಿತ್ತು. ಭಾರತೀಯ ಮೂಲದ 53 ವರ್ಷದ ಕಾರ್ಯನಿರ್ವಾಹಕ ಅಧಿಕಾರಿ 2004 ರಲ್ಲಿ ಗೂಗಲ್ಗೆ ಸೇರಿದ್ದರು, ಕ್ರೋಮ್ ಅನ್ನು ಅಭಿವೃದ್ಧಿಪಡಿಸಿದರು ಮತ್ತು ಉನ್ನತ ಹುದ್ದೆಗೆ ಏರುವ ಮೊದಲು ಆಂಡ್ರಾಯ್ಡ್ ಅನ್ನು ಮುನ್ನಡೆಸಿದರು.
ಇತರ ಪ್ರಮುಖ ಸಿಇಒಗಳ ಸಂಭಾವನೆ
ಸತ್ಯ ನಾದೆಲ್ಲಾ (ಮೈಕ್ರೋಸಾಫ್ಟ್): 96.5 ಮಿಲಿಯನ್ ಡಾಲರ್ (2025 ರ ಹಣಕಾಸು ವರ್ಷ).
ಟಿಮ್ ಕುಕ್ (ಆಪಲ್): 74.3 ಮಿಲಿಯನ್ ಡಾಲರ್.


