ನವದೆಹಲಿ: ಪಶ್ಚಿಮ ಏಷ್ಯಾದ ಸಂಘರ್ಷದಿಂದಾಗಿ ತೈಲ ಪೂರೈಕೆಯಲ್ಲಿ ಉಂಟಾದ ವ್ಯತ್ಯಯದ ನೇರ ಪರಿಣಾಮ ಗ್ರಾಹಕರ ಮೇಲೆ ತಟ್ಟಿದೆ. ಗೃಹ ಬಳಕೆಯ ಎಲ್ಪಿಜಿ ಸಿಲಿಂಡರ್ ದರ ರೂ. 60 ಹಾಗೂ ವಾಣಿಜ್ಯ ಬಳಕೆಯ ಸಿಲಿಂಡರ್ ದರ ರೂ. 114.5 ಏರಿಸಲಾಗಿದೆ.
ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ) ವೆಬ್ಸೈಟ್ ಪ್ರಕಾರ, ದರ ಏರಿಕೆಯೊಂದಿಗೆ ಸಬ್ಸಿಡಿಯೇತರ 14.2 ಕೆ.ಜಿ ಗೃಹ ಬಳಕೆಯ ಸಿಲಿಂಡರ್ ದರ ದೆಹಲಿಯಲ್ಲಿ ರೂ.913 ಗೆ ತಲುಪಿದೆ. ಈ ಹಿಂದೆ ರೂ. 853 ಇತ್ತು.
ಒಂದು ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ ಎಲ್ಪಿಜಿ ದರ ಏರಿಕೆಯಾಗುತ್ತಿರುವುದು ಇದು ಎರಡನೇ ಬಾರಿ.
ಪಶ್ಚಿಮ ಏಷ್ಯಾ ಸಂಘರ್ಷದಿಂದ ಉಲ್ಬಣಗೊಂಡಿರುವ ಜಾಗತಿಕ ತೈಲ ಬಿಕ್ಕಟ್ಟಿನ ಪರಿಣಾಮವೇ ಬೆಲೆ ಏರಿಕೆಗೆ ಕಾರಣ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.
ಈ ಏರಿಕೆಯ ಹೊರೆತಾಗಿಯೂ, ನೆರೆಯ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದಲ್ಲಿಯೇ ಎಲ್ಪಿಜಿ ದರ ಕಡಿಮೆ ಇದೆ.
ಇಂದಿನಿಂದಲೇ (ಮಾ.7) ಪರಿಷ್ಕೃತ ದರ ಜಾರಿಗೆ ಬರಲಿದೆ. ಕಳೆದ ವರ್ಷ ಏಪ್ರಿಲ್ನಲ್ಲಿ ರೂ. 50 ಏರಿಕೆ ಮಾಡಲಾಗಿತ್ತು.
ಉಜ್ವಲಾ ಯೋಜನೆಯ ಫಲಾನುಭವಿಗಳು 14.5 ಕೆ.ಜಿಯ ಸಿಲಿಂಡರ್ಗೆ ರೂ.300 ಸಬ್ಸಿಡಿ ಪಡೆಯಲಿದ್ದಾರೆ. ಇದು ವರ್ಷಕ್ಕೆ 12 ಸಿಲಿಂಡರ್ಗೆ ಮಾತ್ರ ಸೀಮಿತ.
19 ಕೆ.ಜಿ.ಯ ವಾಣಿಜ್ಯ ಬಳಕೆ ಸಿಲಿಂಡರ್ ಈ ವರ್ಷ
ರೂ. 302.50 ಏರಿಕೆಯಾಗಿದೆ. ಮಾರ್ಚ್ 1 ರಿಂದಷ್ಟೇ ಸಿಲಿಂಡರರ್ಗೆ ರೂ.28 ಏರಿಕೆ ಮಾಡಲಾಗಿತ್ತು.


