*ಚಿಕ್ಕೋಡಿ ACಯಿಂದ ಬೆಳ್ಳಂ ಬೆಳಗ್ಗೆ ಮಿಂಚಿನ ಸಂಚಾರ*
*ನಿದ್ದೆಯಲ್ಲಿದ್ದ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ ಸಂಪಗಾವಿ*
ಬೆಳಗಾವಿ : ಬೆಳ್ಳಂಬೆಳಿಗ್ಗೆ ಚಿಕ್ಕೋಡಿ ವಿಭಾಗಾಧಿಕಾರಿ ಬುಧವಾರ ಮಿಂಚಿನ ಸಂಚಾರ ನಡೆಸಿ. ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದಾರೆ.
ಉಪವಿಭಾಧಿಕಾರಿ ಸುಭಾಷ್ ಸಂಪಗಾಂವಿ ನೇತೃತ್ವದಲ್ಲಿ ತಹಶಿಲ್ದಾರ ಹಾಗೂ ಮುಖ್ಯಾಧಿಕಾರಿಯೊಂದಿಗೆ ಬೆಳ್ಳಂಬೆಳಿಗ್ಗೆ ಚಿಕ್ಕೋಡಿ ಪಟ್ಟಣದಲ್ಲಿ ಸಂಚಾರ ನಡೆಸಿ ಪರಿಶೀಲನೆ ನಡೆಸಿದರು.
ಮೊದಲಿಗೆ ಪಟ್ಟಣದಲ್ಲಿರುವ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದರು. ಸಾಮಾನ್ಯ ಜನರಂತೆ ಆಸ್ಪತ್ರೆಗೆ ಭೇಟಿ ನೀಡುತ್ತಿದ್ದಂತೆ ನಿದ್ದೆ ಮಂಪರದಲ್ಲಿದ್ದ ಆಸ್ಪತ್ರೆ ಸಿಬ್ಬಂದಿಗೆ ಅಧಿಕಾರಿಗಳ ದಂಡು ಕಾಣುತ್ತಿದ್ದಂತೆ ಅವಕ್ಕಾದರು. ಆಸ್ಪತ್ರೆಗೆ ಎಲ್ಲಾ ವಿಭಾಗದ ಕೊಠಡಿಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಅಲ್ಲದೇ ರೋಗಿಗಳನ್ನು ಇಲ್ಲಿನ ವ್ಯವಸ್ಥೆ ಕುರಿತು ವಿಚಾರಿಸಿದರು. ಬಳಿಕ ಆಸ್ಪತ್ರೆ ಸಿಬ್ಬಂದಿಗೆ ಸರ್ಕಾರಿ ಆಸ್ಪತ್ರೆಗೆ ಬರುವ ರೋಗಿಗಳು ಬಡ ಹಾಗೂ ಮಧ್ಯಮ ವರ್ಗದ ಜನರಿದ್ದು, ತಾವು ಯಾವುದೇ ಲೋಪ ಆಗದಂತೆ ಕರ್ತವ್ಯ ನಿರ್ವಹಿಸಬೇಕು ಹಾಗೂ ಸ್ವಚ್ಚತೆಗೆ ಹೆಚ್ಚಿನ ಮಹತ್ವ ನೀಡಬೇಕು ಎಂದು ಸೂಚಿಸಿದರು.
ಬಳಿಕ ಗಾಂಧಿ ಮಾರ್ಕೆಟ್, ಜಾರಿಗಲ್ಲಿ ಹಾಗೂ ಪ್ರವಾಸಿ ಮಂದಿರಕ್ಕೆ ಭೇಟಿ ನೀಡಿದ ಅಧಿಕಾರಿಗಳ ತಂಡ. ಸ್ವಚ್ಚತೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಕುರಿತು ಪರಿಶೀಲಿಸಿದರು.


