ಬೆಳಗಾವಿ: ಮದುವೆಯಾಗುವುದಾಗಿ ಹೇಳಿ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪಿಗೆ ಕಠಿಣ ಶಿಕ್ಷೆ ಮತ್ತು ಒಂದುವರೆ ಲಕ್ಷ ರೂಪಾಯಿ ದಂಡ ವಿಧಿಸಿ ಪೋಕ್ಸೊ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ.
ಹುಕ್ಕೇರಿ ತಾಲೂಕು
ಮಾಸ್ತಿಹೊಳಿ ಗ್ರಾಮದ 24 ವರ್ಷದ ಮಂಜುನಾಥ ಶಂಕರ ಮೊಕಾಶಿ ಶಿಕ್ಷೆಗೊಳಗಾದ ಆರೋಪಿ. ಬಾಲಕಿಯನ್ನು ಅಪಹರಿಸಿ ಬಾಡಿಗೆ ಮನೆಯಲ್ಲಿ ಇಟ್ಟು ನಿರಂತರವಾಗಿ ಆತ್ಯಾಚಾರ ಎಸಗಿದ ಬಗ್ಗೆ ದೂರು ದಾಖಲಾಗಿತ್ತು. ಇದೀಗ ಆರೋಪಿಗೆ ಶಿಕ್ಷೆ ಘೋಷಣೆಯಾಗಿದೆ.


