ಬೆಳಗಾವಿ : ಮಾಳಮಾರುತಿ ಪೊಲೀಸರು, ಆರೋಪಿಗಳು ದೂರುದಾರರ ಖಾಸಗಿ ಕ್ಷಣಗಳನ್ನು ವಿಡಿಯೋ ಮಾಡಿಕೊಂಡು, ಅವುಗಳನ್ನು ಸಾಮಾಜಿಕ ಜಾಲತಾಣ ಹಾಗೂ ನ್ಯೂಸ್ ಚಾನಲ್ಗಳಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದರು. ಈ ವಿಡಿಯೋ ಪ್ರಸಾರ ಮಾಡದಿರಲು ರೂ.50 ಲಕ್ಷ ಹಣ ನೀಡುವಂತೆ ದೂರುದಾರರನ್ನು ಒತ್ತಾಯಿಸಿದ್ದರು.
ಈ ಕುರಿತು ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಸಂತೋಷ ಸತ್ಯನಾಯಿಕ, ಎಸಿಪಿ ಮಾರ್ಕೆಟ್ ಉಪ-ವಿಭಾಗ ಬೆಳಗಾವಿ, ಅವರ ಮಾರ್ಗದರ್ಶನದಂತೆ ಮಾಳಮಾರುತಿ ಪೊಲೀಸ್ ಠಾಣೆಯ ಪಿಐ ಬಿ.ಆರ್. ಗಡ್ಡೇಕರ ಅವರ ನೇತೃತ್ವದಲ್ಲಿ ವಿಶೇಷ ತಂಡವು ಕಾರ್ಯಾಚರಣೆ ನಡೆಸಿದೆ.
ಆರೋಪಿತರಾದ ಸಮೀರ್ ನಿಸಾರ್ ಅಹಮ್ಮದ್ ಶೇಖ್ (32) ಸಾ: ಜಲಾಲ ಗಲ್ಲಿ, ಗೋಕಾಕ, ಅಬ್ದುಲ್ರಶೀದ್ ನಜೀರ್ ಅಹಮ್ಮದ್ ಮಕಾಂದಾರ್ (51) ಸಾ: ಯೋಗಿಕೋಳ್ಳ, ಗೋಕಾಕ, ಮೊಹಮ್ಮದ್ ದಿಲಾವರ್ ಬಾಳೇಕುಂದ್ರಿ (43) ಸಾ: ಘಟಪ್ರಭಾ, ಗೋಕಾಕ ಈ ಆರೋಪಿತರಿಗೆ ದಸ್ತಗೀರ ಮಾಡಿ ಆರೋಪಿತರು ಕೃತ್ಯಕ್ಕೆ ಬಳಸಿರುವ ವಿವಿಧ ವಸ್ತುಗಳನ್ನು ಜಪ್ತು ಮಾಡಿಕೊಳ್ಳಲಾಗಿದೆ.


