ಹೃದಯಾಘಾತಕ್ಕೆ ಬಲಿಯಾದ ಬೆಳಗಾವಿ ಸರ್ವೇ ಇಲಾಖೆ ಸಿಬ್ಬಂದಿ.
ಕಡಲೆ ಸುಗ್ಗಿ ಮಾಡಲು ಹೋಗಿದ್ದ ಉಳವೇಶ ಶೀಂತ್ರಿ ಇನ್ನಿಲ್ಲ.
ಬೆಳಗಾವಿ: ತಾಲೂಕಿನ ಭೂಮಾಪನ ಇಲಾಖೆಯ ADLR ಹಾಗೂ DDLR ಕಚೇರಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿ ಉಳವೇಶ ಶೀಂತ್ರಿ ನಿನ್ನೆ ಸೋಮವಾರ ರಾತ್ರಿ (2 ಫೆಬ್ರುವರಿ) ಹಠಾತ್ ಹೃದಯಘಾತದಿಂದ ನಿಧನರಾಗಿದ್ದಾರೆ.
ಮೃತ ಉಳವೇಶ ಶೀಂತ್ರಿ ಮೂಲತ ಬೈಲಹೊಂಗಲ ತಾಲೂಕಿನ ಮತ್ತಿಕೊಪ್ಪ ಗ್ರಾಮದ ನಿವಾಸಿ.
ಕಳೆದೆರಡು ವರ್ಷಗಳಿಂದ ಬೆಳಗಾವಿ ADLR ಹಾಗೂ DDLR ಕಚೇರಿಯಲ್ಲಿ ಹಿರಿಯ ಅಧಿಕಾರಿಗಳ ವಾಹನ ಚಾಲಕನಾಗಿ ಮತ್ತು ಕಚೇರಿಯಲ್ಲಿ ಇನ್ನಿತರ ಕೆಲಸಗಳನ್ನು ಮಾಡುತಿದ್ದ. ನಿನ್ನೆ ಮಧ್ಯಾಹ್ನ ಕಚೇರಿಯಿಂದ ಸ್ವಗ್ರಾಮ ಮತ್ತಿಕೊಪ್ಪ ಗೆ ಕಡಲೆ ಸುಗ್ಗಿ ಮಾಡಲು ಹೋಗಿದ್ದ ಉಳವೇಶ ಶೀಂತ್ರಿ ಹಠಾತ್ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.
ಇತ್ತೀಚೆಗೆ ಮದುವೆಯಾಗಿದ್ದ ಉಳವೇಶಗೆ ಪುಟ್ಟ ಮಗು ಇದ್ದು ತಂದೆಯನ್ನು ಗುರುತಿಸಿ ತೊಡೆ ಮೇಲೆ ಆಡುವ ಮೊದಲೇ ತಬ್ಬಲಿಯಾಗಿದೆ.
ಇವರ ಅಂತ್ಯಕ್ರಿಯೆ ಅವರ ಸ್ವಗ್ರಾಮ ಮತ್ತಿಕೊಪ್ಪದಲ್ಲಿ ನೆರವೇರಿತು.
ಮೃತ ಉಳವೇಶ ನಿಧನಕ್ಕೆ ಸರ್ವೇ,ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಂಬನಿ ಮಿಡಿದಿದ್ದಾರೆ.


