ಬೆಳಗಾವಿ : ಕರ್ನಾಟಕ ಲೇಖಕಿಯರ ಸಂಘ ಬೆಳಗಾವಿ ಜಿಲ್ಲಾ ಘಟಕವು ಕನ್ನಡ ಸಾಹಿತ್ಯ ಭವನ ವಿಶ್ವಸ್ಥಮಂಡಳಿಯ ಸಹಯೋಗದೊಂದಿಗೆ ಆಯೋಜಿಸಿದ್ದ ಒಂದು ದಿನದ ವಿಮರ್ಶಾ ಕಮ್ಮಟದಲ್ಲಿ ಸಂಪನ್ಮೂಲ ವ್ಯಕ್ತಿ ಡಾ. ಗುರುಪಾದ ಮರಿಗುದ್ದಿಯವರು ಸಾಹಿತ್ಯ ವಿಮರ್ಶೆ ಎನ್ನುವುದು ಅಂತಿಮವಾಗಿ ಲೋಕ ಗ್ರಹಿಕೆಯಾಗಿದೆ ಎಂದರು.
ಭಾರತೀಯರಲ್ಲಿ ವಿಮರ್ಶೆ ಎಂಬುದು ಕಾವ್ಯ ಮೀಮಾಂಸೆಯಾಗಿತ್ತು. ರಸ ,ಧ್ವನಿ ,ಅಲಂಕಾರ, ಔಚಿತ್ಯ ಗಳ ಚರ್ಚೆಯು ಬೆಳೆದು. ಆಧುನಿಕ ಕಾವ್ಯ ವಿಮರ್ಶೆಯ ಚರ್ಚೆಯಲ್ಲಿ ಪಾಶ್ಚಾತ್ಯ ಮತ್ತು ಭಾರತೀಯ ಮೀಮಾಂಸೆಗಳು ಬೆರೆತು ಬಿ.ಎಂ.ಶ್ರೀ ಯವರಿಂದ ಕುವೆಂಪು ಅವರ ದರ್ಶನ ಮೀಮಾಂಸೆಯ ತನಕ ಬೆಳೆದು ಬಂದ ಬಗೆಯನ್ನು ವಿವರಿಸಿದರು.
ಕಮ್ಮದ ಸಂಪನ್ಮೂಲ ವ್ಯಕ್ತಿ ಡಾ. ತಾರಿಣಿ ಶುಭದಾಯಿನಿ ಅವರು
‘ವಿಮರ್ಶೆ ಎಂಬುದು ಒಂದು ಬೌದ್ಧಿಕ ಚಟುವಟಿಕೆ ಅದು ಬುಧ್ದಿಯನ್ನು ಸಜನಾತ್ಮಕವಾಗಿಸುತ್ತದೆ.
ವಿಪುಲವಾದ ಓದು ವಿವಿಧ ಜ್ಞಾನ ಶಾಖೆಗಳ ಅರಿವು ವಿಮರ್ಶಕರಿಗೆ ಬೇಕು ‘ ಎಂದು ಹೇಳಿದರು.
ಪಾಶ್ಚಾತ್ಯ ಮೀಮಾಂಸೆಯ ದುರಂತ ನಾಟಕಗಳು ಸಂರಚನಾವಾದ ವಿರಚನವಾದ ಕೆಥಾರ್ಸಿ ಸ್ ತತ್ವಗಳನ್ನು ವಿವರಿಸುತ್ತ ಡೆರಿಡಾನ ವಿಚಾರಗಳಿಗೂ ಪ್ರವೇಶ ಕೊಟ್ಟರು ಇಂದಿನ ವಿಮರ್ಶೆಯಲ್ಲಿ ಸಾಹಿತ್ಯ ತತ್ವಗಳು ಸಂಸ್ಕೃತಿ ಗಳು ಸಂಗಮವಾಗಿ ಸಾಂಸ್ಕೃತಿಕ ವಿಮರ್ಶೆಯಾಗಿ ಬೆಳೆಯುತ್ತಿರುವ ಕನ್ನಡ ಆಧುನಿಕ ವಿಮರ್ಶೆಯ ಸುಳಿವುಗಳನ್ನು ನೀಡಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿದ ಡಾ.ಗುರುದೇವಿ ಹುಲೆಪ್ಪನವರಮಠ ವಿಮರ್ಶೆ ಅದರ ಇಂದಿನ ಅನಿವಾರ್ಯತೆ ಮತ್ತು ಉಪಯೋಗಗಳನ್ನು ವಿವರಿಸಿದರು.
ಕರ್ನಾಟಕ ಲೇಖಕಿಯರ ಸಂಘ ಬೆಳಗಾವಿ ಜಿಲ್ಲೆಯ ಅಧ್ಯಕ್ಷೆ ಡಾ. ಕೆ. ಆರ್. ಸಿದ್ದಗಂಗಮ್ಮ ಅಧ್ಯಕ್ಷತೆ ವಹಿಸಿ ವಿಮರ್ಶೆಯು ಟೀಕೆ ಪ್ರತಿಕ್ರಿಯೆಗಳಿಗಿಂತ ಮುಂದಿನದು .ಆರೋಗ್ಯಕರ ವಿಮರ್ಶೆ ಇಂದಿನ ಸಮಾಜದ ಅನಿವಾರ್ಯ ಎಂದರು.
ಆರ್.ಬಿ. ಕಟ್ಟಿ ಗೌ ಕಾರ್ಯದರ್ಶಿ ಕಸಾಭ ವಿಶ್ವಸ್ಥ ಮಂಡಳಿ ಇವರು ಸಮಾರೋಪ ಕಾರ್ಯಕ್ರಮದ ಅತಿಥಿಗಳಾಗಿ ಆಗಮಿಸಿ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ ಮಾಡಿದರು.
40 ಜನ ಶಿಬಿರಾರ್ಥಿಗಳು ಭಾಗವಹಿಸಿದ್ದರು.
೧)ದೇವನೂರು ಮಹಾದೇವ
೨) ಡಿ. ವಿನಯ ಚಂದ್ರ
೩)ರಾಜಶೇಖರ ಹಳೆಮನಿ
೪)ಸವಿತಾ ನಾಗಭೂಷಣ್
೫)ನದೀಮ್ ಸನದಿ
೬)ಅಕ್ಷತಾ ಕೃಷ್ಣಮೂರ್ತಿ
ಇವರ ಕಥೆ ಮತ್ತು ಕವಿತೆಗಳನ್ನು ಪ್ರಾಯೋಗಿಕ ವಿಮರ್ಶೆ ಮಾಡಿದರು.
ಕ.ಲೇ.ಸಂ ನ ಉಪಾಧ್ಯಕ್ಷೆ ಜ್ಯೋತಿ ಬಾದಾಮಿ ಸ್ವಾಗತಿಸಿದರು. ಕಾರ್ಯದರ್ಶಿ ಡಾ.ನಿರ್ಮಲಾ ಬಟ್ಟಲ ವಂದಿಸಿದರು ಡಾ.ನೀತಾ ರಾವ್ ಕಾರ್ಯಕ್ರಮ ನಿರೂಪಿಸಿದರು. ಸಹ ಕಾರ್ಯದರ್ಶಿ ರಾಜನಂದಾ ಗಾರ್ಗಿ ಮತ್ತು ಸುಧಾ ಪಾಟೀಲ ನೋಂದಣಿ ಮಾಡಿಕೊಂಡರು. ಪುಷ್ಪ ಮುರಗೋಡ ಪ್ರಾರ್ಥಿಸಿದರು. ಡಾ.ರಂಜನಾ ಗೋಧಿ , ಶಶಿಧರ ಹೊಸಕೋಟೆ , ನೀಲಗಂಗಾ ಚರಂತಿಮಠ , ಲಲಿತಾ ಕೋಪರ್ಡೆ,
ಪ್ರೊ.ಸಿದ್ಧನಗೌಡ ಚೋಬಾರಿ, ಸುಮಿತ್ರಾ ಚೋಬಾರಿ, ಪ್ರೋ.ಶಿಂತ್ರಿ ಹಮೀದಾ ಬೇಗಂ ದೇಸಾಯಿ, ಪುಷ್ಪಾ ಮುರಗೋಡ, ಕವಿತಾ ಕುಸಗಲ್ಲ ಅನೇಕ ಗಣ್ಯರು ಶಿಬಿರಾರ್ಥಿ ಗಳೊಂದಿಗೆ ಸಂವಾದದಲ್ಲಿ ಭಾಗವಹಿಸಿ ಕಮ್ಮಟವನ್ನು ಯಶಸ್ವಿಗೊಳಿಸಿದರು.


