ಇತಿಹಾಸ ಸಾರುತಿದೆ,
ನಿಮ್ಮ ಹೆಜ್ಜೆ ಗುರುತು
ನಿಲ್ಲಬಹುದೇ ಜನ ?,
ನಿಮ್ಮ ಸಾಧನೆ ಮರೆತು!
ಎಡಬಿಡದೆ ಎಲ್ಲ
ಕ್ಷೇತ್ರಗಳಲ್ಲೂ
ಮುನ್ನುಗ್ಗುವ ಶ್ರಮಿಕ
ವಿದ್ಯಾ ಕ್ಷೇತ್ರಗಳನು
ಎತ್ತರಕ್ಕೇರಿಸಿದ ನಾಯಕ
ಮಹಾದಾನಿಗಳ
ಸಪ್ತರ್ಷಿಗಳ ತ್ಯಾಗ
ಭವ್ಯ ಪರಂಪರೆಗೆ
ಅವರು ತೃಪ್ತಿ ತಾಳುವ
ಹಾಗೆ ನೀಡಿದಿರಿ ನೀವು
ಹಲವಾರು ಕೊಡುಗೆ
ನೀವು ನಡೆದ ದಾರಿಯಲಿ
ಅರಳಿದವು ಹೂವುಗಳು!
ಅನ್ನ, ಅರಿವು, ಆರೋಗ್ಯ
ದಿವ್ಯ ಮಂದಿರಗಳು!
ಅವೇ, ಆರೋಗ್ಯ, ಶಿಕ್ಷಣ,
ಕೃಷಿ ಕೇಂದ್ರಗಳು!
ನಿಮ್ಮ ಸೇವೆಯ
ನೆನೆದು ರೋಗಿಯ
ಕಣ್ಣಿನಲಿ ಉದುರಿದವು
ಕಂಬನಿ ಹನಿಗಳು!
ಅವೇ ನಿಮಗೆ ದೊರೆತ
ಅಮೂಲ್ಯ ಮುತ್ತುಗಳು!
ನ್ಯಾಯ ನೀತಿಗೆ
ತಲೆಯೆತ್ತಿ ನಿಂತಿತು
ಕಾನೂನು ಕಾಲೇಜು
ನೀವು ಏರಿದ
ಆಕಾಶದೆತ್ತರಕೆ
ಅದೇ ಕೋಟೆ ಬುರುಜು!
ಅಧಿವೇಶನ
ವಿಶ್ವ ಸಮ್ಮೇಳನ
ಶರಣ ಮೇಳ
ಸಾಹಿತ್ಯ ಸಮ್ಮೇಳನ
ಅದೇ ನಿಮಗೆ ದೊರೆತ
ಸಂಭ್ರಮದ ನುಡಿನಮನ!
ನಿಮ್ಮ ಕೃಷಿ ಕೇಂದ್ರದಾ
ಹೊಲ ಗದ್ದೆಗಳಲಿ
ಹೂದೆನೆ ಪಯಿರು.
ನೀಡಿದ ಕೃಷಿಕನಿಗೆ
ಸಂದ ಶ್ರೇಷ್ಠ
ಪುರಸ್ಕಾರಕೆ
ಗುನಗಾನ ಮಾಡಿದವು
ಗುಬಚ್ಚಿ ಗಿಳಿ
ಕೋಗಿಲೆ ಹಿಂಡು…!!
ನೀವು ಎಲ್ಲಿಯೇ
ಕೈಯಾಡಿಸಿದರು
ಹಸಿರೇ ಉಸಿರು..!
ನೀವು ಎಲ್ಲರೂ
ಮೋಹಿಸುವ ಗಾರುಡಿಗ..!
ಅಷ್ಟೊಂದು
ಬೆಳೆದಿದೆ ಚಿನ್ನದಲ್ಲಿ
ಬರೆಯಬಹುದಾದ
ನಿಮ್ಮ ಹೆಸರು..!
ಜನಕಲ್ಯಾಣಕೆ ತಾವು
ಎದೆಗಾರಿಕೆಯಿಂದ
‘ಆಕ್ರಮಣ’ ನುಂಗಿ
ಧೈರ್ಯದಿಂದ
ಸೂರ್ಯನಾಗಿ ನಿಂತು
ನಾಡಿಗೇ ನಾಡೇ
ಬೆಳಕು ನೀಡಿದಿರಿ!
ನಿಮ್ಮ ನಿಸ್ವಾರ್ಥ
ಕಾಯಕಕೆ ಒಲಿಯಿತು
ಪದ್ಮಶ್ರೀ ಪದಕ..!
ಧನ್ಯ ಧನ್ಯ.!
ನಿಮ್ಮಂಥ
ನಾಯಕನನ್ನು ಪಡೆದ
ಕರ್ನಾಟಕವೇ ಧನ್ಯ..!
– –ಶಿವರಾಯ ಏಳುಕೋಟಿ.
ಪ್ರಭಾಕರರ ಮುಡಿಗೆ ಒಲಿದು ಬಂತು ‘ಪದ್ಮಶ್ರೀ’ ಪದಕ


