ಬೆಳಗಾವಿ: 400 ಕೋಟಿ ರೂ. ದರೋಡೆಗೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಪೊಲೀಸರಿಗೆ ಎಲ್ಲಾ ವಿಧದಲ್ಲೂ ಸಹಕರಿಸಲಿದ್ದೇವೆ ಎಂದು ಎಸ್ ಪಿ ರಾಮಚಂದ್ರನ್ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಜನವರಿ ಆರರಂದು ನಮಗೆ ನಾಸಿಕ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರಿಂದ ಪತ್ರ ಬಂದಿದೆ. ಚೋರ್ಲಾ ಘಾಟ್ ನಲ್ಲಿ ಆಗಿರಬಹುದು ಅಂತ ಪತ್ರದಲ್ಲಿ ಇದ್ದು ಅಕ್ಟೋಬರ್ 22ರಂದು ಸಂದೀಪ್ ಪಾಟೀಲ್ ಎಂಬಾತ ನನ್ನು ವಿಶಾಲ್ ನಾಯ್ಡು ಎಂಬ ವ್ಯಕ್ತಿ ನಾಸಿಕ್ ನಲ್ಲಿ ಅಪರಿಚಿದ್ದಾನೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಆದ್ದರಿಂದ ಖಾನಾಪುರ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಸೇರಿ ತಂಡವನ್ನು ಕಳಿಸಿರುವುದಾಗಿ ಅವರು ವಿವರಿಸಿದ್ದಾರೆ.
ಯಾವ ನೋಟು ಎಂಬ ಬಗ್ಗೆ ನಮಗೆ ಅಧಿಕೃತವಾಗಿ ಗೊತ್ತಾಗಿಲ್ಲ. ಚೋರ್ಲಾ ಘಾಟ್ ನಲ್ಲಿ ತಕ್ಷಣ ಸಿಸಿಟಿವಿ ಅಳವಡಿಸಲಾಗುವುದು. ಮಹಾರಾಷ್ಟ್ರದ ಎಸ್ಐಟಿ ರಚನೆಯಾಗಿದೆ. ಸಂದೀಪ್ ಪಾಟೀಲ್ ಬಳಿ ನಮ್ಮ ಪೊಲೀಸರು ಮಾತನಾಡಿದ್ದಾರೆ .ಆತನ ಪ್ರಕಾರ ಅಪರಿಸಿದವರು ಹಣ ದರೋಡೆ ಬಗ್ಗೆ ಹೇಳಿದ್ದಾರೆ. ದರೋಡೆ ಬಗ್ಗೆ ಯಾರು ದೂರು ಕೊಟ್ಟರು ನಾವು ತೆಗೆದುಕೊಳ್ಳತ್ತೇವೆ. ಚೋರ್ಲಾ ಘಾಟ್ ಅನ್ನುವುದು ಮಹಾರಾಷ್ಟ್ರ, ಕರ್ನಾಟಕ ಮತ್ತು ಗೋವಾ ರಾಜ್ಯಗಳಿಗೆ ಗಡಿಯಾಗಿದೆ ಎಂದು ಅವರು ತಿಳಿಸಿದರು.
ಬೆಚ್ಚಿ ಬೀಳಿಸಿದ 400 ಕೋಟಿ ರೂ. ದರೋಡೆ ಪ್ರಕರಣ :
ದೇಶವನ್ನೆ ಬೆಚ್ವಿಬೀಳಿಸುವ ಬೆಳಗಾವಿ ಗಡಿಯಲ್ಲಿ ನಡೆದ 2 ಲಾರಿಗಳಲ್ಲಿದ್ದ ರೂ. 400 ಕೋಟಿ ದರೋಡೆ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಈ ಪ್ರಕರಣದಲ್ಲಿ ಮಹಾರಾಷ್ಟ್ರ ಪೊಲೀಸರು ಸದ್ಯ ಐದು ಜನರನ್ನು ವಶಕ್ಕೆ ಪಡೆದಿದ್ದು, ಇನ್ನುಳಿದವರಿಗಾಗಿ ಹುಡಕಾಟ ನಡೆಸಿದ್ದಾರೆ. ಈ ಪ್ರಕರಣದಲ್ಲಿ ಮಹಾರಾಷ್ಟ್ರ ಪೊಲೀಸರಿಗೆ ಬೆಳಗಾವಿ ಪೊಲೀಸರು ಸಾಥ್ ನೀಡಿದ್ದಾರೆ.
ಮಹಾರಾಷ್ಟ್ರ ರಿಯಲ್ ಎಸ್ಟೇಟ್ ಉದ್ಯಮಿ ಕಿಶೋರ್ ಶೇಟ್ ಎಂಬುವವರಿಗೆ ಸೇರಿದ ಹಣವನ್ನು 2025ರ ಅಕ್ಟೋಬರ್ 16ರಂದು ಖಾನಾಪುರ ತಾಲೂಕಿನ ಚೋರ್ಲಾ ಘಾಟ್ ಮೂಲಕ ಗೋವಾದಿಂದ ಮಹಾರಾಷ್ಟ್ರಕ್ಕೆ 2 ಕಂಟೇನರ್ ವಾಹನಗಳಲ್ಲಿ ಹೊರಟಿದ್ದ 400 ಕೋಟಿ ರೂ. ನಗದು ಹಣವನ್ನು ಕೆಲ ಕಿಡಿಗೇಡಿಗಳು ಲಾರಿಗಳ ಸಮೇತವಾಗಿ ಹಣವನ್ನು ಹೈಜಾಕ್ ಮಾಡಿ ದೋಚಿದ್ದರು.
ದೇಶದ ಅತೀ ದೊಡ್ಡ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಖಾನಾಪುರ ತಾಲೂಕಿನ ಚೋರ್ಲಾ ಘಾಟ್ ನಲ್ಲಿ ಕಂಟೇನರ್ ಹೈಜಾಕ್ ಮಾಡಿದ್ದ ಈ ಪ್ರಕರಣವು ಮಹಾರಾಷ್ಟ್ರದಲ್ಲಿ ಸಂಚಲನ ಮೂಡಿಸಿತ್ತು.
ಈ ಪ್ರಕರಣ ಗಂಭೀರವಾಗಿ ಪರಿಗಣಿಸಿದ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಈ ಪ್ರಕರಣ ತನಿಖೆಗೆ ಎಸ್ಐಟಿ ರಚಿಸಿ ಆದೇಶ ಹೊರಡಿಸಿದ್ದಾರೆ.
ಮಹಾರಾಷ್ಟ್ರ ರಿಯಲ್ ಎಸ್ಟೇಟ್ ಉದ್ಯಮಿ ಕಿಶೋರ್ ಶೇಟ್ ಎಂಬುವವರಿಗೆ ಸೇರಿದ ಹಣ ಇದಾಗಿದೆ ಎನ್ನಲಾಗಿದೆ.
ಮಹಾರಾಷ್ಟ್ರ ದ ನಾಸಿಕ್ ಮೂಲದ
ಸಂದೀಪ್ ಪಾಟೀಲ್ ಎಂಬ ವ್ಯಕ್ತಿ ಅಪಹರಣದಿಂದ ಪ್ರಕರಣ ಬೆಳಕಿಗೆ ಬಂದಿದೆ. ಬೆಳಗಾವಿ ಗೋವಾ ಗಡಿ ಚೋರ್ಲಾ ಘಾಟ್ ದಿಂದ ಕಂಟೇನರ್ ವಾಹನಗಳು ಹೈಜಾಕ್ ಆಗಿವೆ. ಈ ಸಂಬಂಧ ಮಹಾರಾಷ್ಟ್ರ ಪೊಲೀಸರು ಐವರು ಆರೋಪಿತರನ್ನು ವಶಕ್ಕೆ ಪಡೆದಿದ್ದಾರೆ.
ಇನ್ನೂಳಿದ ಆರೋಪಿತರಿಗಾಗಿ ಹುಡುಕಾಟ ನಡೆಸಿದ್ದು, ಇದಕ್ಕೆ ಸಹಕಾರ ನೀಡುವಂತೆ ಮಹಾರಾಷ್ಟ್ರ ಪೊಲೀಸರು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ಅವರಿಗೆ ಪತ್ರದ ಮೂಲಕ ವಿನಂತಿಸಿದ್ದಾರೆ. ಇದಕ್ಕೆ ಸ್ಪಂದಿಸಿದ ಎಸ್ ಪಿ ತಮ್ಮ ತಂಡವನ್ನು ಖದೀಮರ ಹುಡುಕಾಟಕ್ಕೆ ರವಾನಿಸಿದ್ದಾರೆ.


