ಬೆಳಗಾವಿ : ರಸ್ತೆಯಲ್ಲಿ ನಿಂತಿದ್ದ ಕಂಟೇನರ್ ಲಾರಿಗೆ ಕಾರೊಂದು ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಪತಿ ಹಾಗೂ ಪತ್ನಿ ಇಬ್ಬರು ಸಾವನ್ನಪ್ಪಿದ್ದು, ಅವರ ಒಂದು ವರ್ಷದ ಮಗು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಕೊಗನೊಳ್ಳಿ ಬಳಿ ಜರುಗಿದೆ.
ಅಪಘಾತದಲ್ಲಿ ಕೊಲ್ಲಾಪುರದ ಸಂಭಾಜಿ ನಗರದ ಜಿಗರ ಕಿಶೋರ ನಾಕ್ರಾನಿ ಹಾಗೂ ಪತ್ನಿ ಹೇತಿಕಾ (24) ಮೃತಪಟ್ಟಿದ್ದಾರೆ. ದಂಪತಿ ಜೊತೆ ಇದ್ದ ಮಗಳು ಒಂದು ವರ್ಷದ ವೃಷ್ಟಿ (1) ಬದುಕುಳಿದಿದ್ದಾಳೆ.
23 ರಂದು ಸಂಜೆ ಟಾಟಾ ಕಂಪನಿಯ ನೆಕ್ಲೋನ್ ಕಾರು ನಂ. ಎಂ ಎಚ್ -09 ಎಫ್. ವಿ-3877 ಇದರಲ್ಲಿ ಹುಬ್ಬಳ್ಳಿಯಿಂದ ಕೊಲ್ಲಾಪುರಕ್ಕೆಹೋಗುತ್ತಿದ್ದಾಗ ನಿಪ್ಪಾಣಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಕೂಗನೊಳ್ಳಿ ಗ್ರಾಮ ಹದ್ದಿಯ ಚೆಕ್ ಪೋಸ್ಟ್ ಸಮೀಪದಲ್ಲಿ ರಸ್ತೆಯ ಮೇಲೆ ನಿಲ್ಲಿಸಿದ್ದ ಟಾಟಾ ಕಂಟೇನರ್ ಲಾರಿ ನಂ ಆರ್.ಜೆ-14 ಜಿಜಿ-9017 ಇದಕ್ಕೆ ಹಿಂಬಂದಿನಿಂದ ಹಾಯಿಸಿ ಅಪಘಾತಪಡಿಸಿದ್ದರು. ಇವರಿಬ್ಬರು ಗಂಭೀರವಾಗಿ ಗಾಯಗೊಂಡಿದ್ದರು.
ಗಾಯಾಳುಗಳನ್ನು ಕೊಲ್ಲಾಪುರದ ಅಷ್ಟೇರಾ ಆಧಾರ ಆಸ್ಪತ್ರೆಯಲ್ಲಿ ಉಪಚಾರಕ್ಕಾಗಿ ದಾಖಲಿಸಲಾಗಿತ್ತು. ಜ.24 ರ ಬೆಳಗಿನ ಜಾವ ಉಪಚಾರ ಫಲಿಸದೇ ಮೃತಪಟ್ಟರು. ನಿಪ್ಪಾಣಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.


