ಅಥಣಿ:-ಎಸ್.ಎಂ. ನಾರಗೊಂಡ ಇಂಟರ್ ನ್ಯಾಶನಲ್ ಶಾಲೆಯಲ್ಲಿ ಜ.24 ರಂದು 5:30 ಕ್ಕೆ ಚಿಗುರು ಕಾರ್ಯಕ್ರಮ ಹಾಗೂ ಶಾಲಾ ಕಟ್ಟಡ ಉದ್ಘಾಟನೆ ಜರುಗಲಿದೆ. ಕಾರ್ಯಕ್ರಮಕ್ಕೆ ಕ್ರೇಜಿಸ್ಟಾರ್ ವಿ.ರವಿಚಂದ್ರನ್ ಆಗಮಿಸಲಿದ್ದಾರೆ ಎಂದು ಯುವ ಮುಖಂಡ ಚಿದಾನಂದ ಸವದಿ ಹೇಳಿದರು.
ಅಥಣಿ ಪಟ್ಟಣದ ಎಸ್.ಎಂ.ನಾರಗೊಂಡ ಶಾಲೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕಾರ್ಯಕ್ರಮದ ಶೇಗುಣಸಿಯ ಮಹಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಅಧ್ಯಕ್ಷತೆಯನ್ನು ಶ್ರೀಶೈಲ ನಾರಗೊಂಡ ಉದ್ಘಾಟಣೆ ಶಾಸಕ ಲಕ್ಷ್ಮಣ ಸವದಿ ಹಾಗೂ ಕಾಗವಾಡ ಶಾಸಕ ರಾಜು ಕಾಗೆ ನೆರವೇರಿಸಲಿದ್ದು,ಮುಖ್ಯ ಅತಿಥಿಗಳಾಗಿ ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ, ಪರಪ್ಪ ಸವದಿ,ಚಿದಾನಂದ ಸವದಿ,ಸಂಸ್ಥೆಯ ಅಧ್ಯಕ್ಷ ವಿವೇಕ ನಾರಗೊಂಡ ,ಡಾ.ಮಹಾಂತೇಶ ಜಾಲಗೇರಿ,ಡಾ.ಅಮಿತ ಗಾಡವೆ, ಹಾಗೂ ಚಿಕ್ಕೊಡಿ ಡಿಡಿಪಿಐ ಸೀತಾರಾಮು ಆರ್.ಎಸ್,ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಆರ್.ಮುಂಜೆ ವಹಿಸಲಿದ್ದಾರೆ. ಈ ಭಾಗದ ವಿದ್ಯಾರ್ಥಿಗಳಿಗೆ ಉತ್ತಮ್ಮ ಶಿಕ್ಷಣ ಹಾಗೂ ಸಂಸ್ಕಾರ ನೀಡುವ ಉದ್ದೇಶವನ್ನು ನಾರಗೊಂಡ ಶಾಲೆಯು ಇಟ್ಟುಕೊಂಡಿದೆ. ಮನರಂಜನೆಗಾಗಿ ಸಂಗೀತ ಸಂಜೆಯಲ್ಲಿ ಸರಿಗಮಪ ಖ್ಯಾತಿಯ ಸುನೀಲ ಗಜಗೊಂಡ,ದರ್ಶನ ಮೆಳವಂಕಿ,ಸುರಕ್ಷಾ ದಾಸ,ಪ್ರಜ್ಞಾ ಮರಾಠೆ,ಐಶ್ವರ್ಯ ಗಂಗೂ ಸಂಗೀತ ಕಾರ್ಯಕ್ರಮ ಜರುಗಲಿದೆ.
ಸಂಸ್ಥೆಯ ಅಧ್ಯಕ್ಷ ವಿವೇಕ ನಾರಗೊಂಡ ಮಾತನಾಡಿ, ನಮ್ಮ ಸಂಸ್ಥೆಯು ಸತತ ಏಳು ವರ್ಷಗಳಿಂದ ಹಾರೂಗೇರಿಯಲ್ಲಿ ಏಳು ವರ್ಷಗಳಿಂದ ಸಾಕಷ್ಟು ಒಳ್ಳೆಯ ಶಿಕ್ಷಣ ನೀಡುತ್ತಾ ಬಂದಿದೆ. ಅಥಣಿಯಲ್ಲಿ ಸಹ ಒಳ್ಳೆಯ ಶಿಕ್ಷಣ ನಿಡಲು ಕಾತುರರಾಗಿದ್ದೆ , ಇದು ಮೊದಲ ವರ್ಷದ ಕಾರ್ಯಕ್ರಮವಾಗಿದ್ದು ಎರಡು ದಿನಗಳ 24 ಹಾಗೂ 25 ಕಾಲ ಚಿಗುರು ಹಾಗೂ ಸಂಕಲ್ಪ 25 ರಂದು 5:30 ಕ್ಕೆ ಸಂಕಲ್ಪ ಕಾರ್ಯಕ್ರಮಕ್ಕೆ ಅಧ್ಯಕ್ಷತೆಯನ್ನು ಡಾ.ಗಿರೀಶ ನಾರಗೊಂಡ ವಹಿಸಲಿದ್ದಾರೆ. ಕಾರ್ಯಕ್ರಮ ಉದ್ಘಾಟನೆ ಯುವ ಮುಖಂಡ ಚಿದಾನಂದ ಸವದಿ ನೆರವೇರಿಸಲಿದ್ದು, ಮುಖ್ಯ ಅತಿಥಿಗಳಾಗಿ ವೈದ್ಯರಾದ ಡಾ.ಸಿ.ಎ.ಸಂಕ್ರಟ್ಟಿ,ಡಾ.ರವಿ ಪಾಂಗಿ,ಡಾ.ಜಿ.ಎಸ್.ಪಾಟೀಲ,ಡಾ.ಮಹೇಶ ಕಾಪಶಿ ಹಾಗೂ ಪ್ರಾಚಾರ್ಯ ಪ್ರಶಾಂತ ಆಗಮಿಸುವರು ಎಂದು ತಿಳಿಸಿದರು.
ಪ್ರಾಚಾರ್ಯ ಇ.ಜಿ.ದಿಕ್ಷೀತ್, ಮುನೀರ ಖಾನಾಪುರ, ಸುಪ್ರೀತ ನೇಗಿನಾಳ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.


