ಬೆಳಗಾವಿ: ಅನೈತಿಕ ಸಂಬಂಧದ ಶಂಕೆ ವ್ಯಕ್ತ ಪಡಿಸಿದ ಗಂಡ ಹೆಂಡತಿಯನ್ನೆ ಕೊಲೆ ಮಾಡಿರುವ ಘಟನೆ ನಡೆದಿದೆ.
ಮೃತ ಮಹಿಳೆಯನ್ನು ಕಿರಣಾ ಅವಿನಾಶ ಬಾಳೇಕುಂದ್ರಿ ಎಂದು ಗುರುತಿಸಲಾಗಿದ್ದು, ಆರೋಪಿ ಗಂಡನನ್ನು ಅವಿನಾಶ ಎಂದು ಗುರುತಿಸಲಾಗಿದೆ. ಖಾನಾಪುರ ತಾಲೂಕಿನ ಕಾಪೊಲಿ ಗ್ರಾಮದಲ್ಲಿ ಕಿರಾಣಿ ಅಂಗಡಿ ನಡೆಸಿ ಗಂಡ- ಹೆಂಡತಿ ಜೀವನ ಸಾಗಿಸುತ್ತಿದ್ದರು.
ರವಿವಾರ ಮೃತ ಕಿರಣಾ ಅವರು ತಮ್ಮ ಕಿರಾಣಿ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದಳು. ಇದೇ ವೇಳೆ ಮನೆಗೆ ಬಂದ ಗಂಡ ಅವಿನಾಶ, ನೀನು ಯಾರೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಿ ಎಂದು ಸಂಶಯ ವ್ಯಕ್ತಪಡಿಸಿ ಲಟ್ಟಣಿಗೆ, ಬಡಿಗೆ, ಕೈಕಾಲಿನಿಂದ ಒದ್ದು ಕೊಲೆ ಮಾಡಿದ್ದಾನೆ ಎಂದು ಮೃತಳ ತಾಯಿ ನಂದಗಡ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ.
ಈ ಬಗ್ಗೆ ನಂದಗಡ ಠಾಣೆ ಅಪರಾಧ ಸಂಖ್ಯೆ 10/2026 ಕಲಂ: 103(1), ಬಿಎನ್ ಎಸ್-2023 ನೇದ್ದರಲ್ಲಿ ದಾಖಲಿಸಿ ಆರೋಪಿ ಅವಿನಾಶನನ್ನು ಬಂಧಿಸಲಾಗಿದೆ.


