ಇಂದೋರ್: ಮಧ್ಯ ಪ್ರದೇಶದ ಕುಷ್ಠ ರೋಗ ಪೀಡಿತ ಭಿಕ್ಷಾಟನೆ ನಡೆಸಿಯೇ ಆಟೋ, ಕಾರು ಸೇರಿ ಲಕ್ಷಾಂತರ ರು. ಆಸ್ತಿ ಸಂಪಾದಿಸಿರುವ ಘಟನೆ ಬೆಳಕಿಗೆ ಬಂದಿದೆ.
ಭಿಕ್ಷಾಟನೆ ಮುಕ್ತ ನಗರವಾ ಗಿರುವ ಇಂದೋರ್ನಲ್ಲಿ ಭಿಕ್ಷಾಟನೆ ನಿರ್ಮೂಲನೆ ಅಭಿಯಾನ ನಡೆಯುತ್ತಿರುವ ವೇಳೆ ಕುಷ್ಠ ರೋಗ ಪೀಡಿತ ಮಂಗಿಲಾಲ್ ಎಂಬ ವ್ಯಕ್ತಿ ಪತ್ತೆಯಾಗಿದ್ದಾನೆ. ಆತನನ್ನು ರಕ್ಷಿಸಿ ಸಂಬಂಧಪಟ್ಟ ಅಧಿಕಾರಿಗಳು ಪೂರ್ವಾಪರ ತಿಳಿದ ವೇಳೆ ಎಲ್ಲರೂ ದಂಗಾಗಿದ್ದು, ಈತ ಸಿರಿವಂತ ಭಿಕ್ಷುಕ ಎನಿಸಿಕೊಂಡಿದ್ದಾನೆ.
ಮೂರು ಅಂತಸ್ತುಗಳಿರುವ 3 ಮನೆಗಳನ್ನು ಹೊಂದಿದ್ದಾನೆ. 3 ಆಟೋ ಗಳನ್ನು ಬಾಡಿಗೆ ನೀಡಿ ದ್ದಾನೆ. ಇಷ್ಟು ಸಾಲದ್ದಕ್ಕೆ ಭಿಕ್ಷೆ ಬೇಡುವುದಕ್ಕೂ ಕಾರಿನಲ್ಲಿಯೇ ತೆರಳುತ್ತಾನೆ. ಅದಕ್ಕಂತೆಯೇ ಚಾಲಕನನ್ನೂ ನೇಮಿಸಿ ಕೊಂಡಿದ್ದಾನೆ ಎನ್ನಲಾಗಿದೆ.
2021 ರಿಂದಲೂ ಭಿಕ್ಷೆ ಬೇಡುತ್ತಿರುವ ಈತ ಬಡ್ಡಿ ವ್ಯವಹಾರವನ್ನೂ ನಡೆಸುತ್ತಿದ್ದಾನೆ. ಈಗಾಗಲೇ 4-5 ಲಕ್ಷ ರು. ಬಡ್ಡಿ ನೀಡಿ ಅದ ರಿಂದಲೇ ನಿತ್ಯ 1000 -1200 ರು.ಗಳವರೆಗೆ ಬಡ್ಡಿಯೂ ಪಡೆಯು ತ್ತಿದ್ದಾನೆ. ಮುಂದುವರೆಸಿರುವ ಇವನು ಅದರಿಂದಲೂ ನಿತ್ಯ 400- 500 ರು. ಸಂಪಾದಿಸುತ್ತಿದ್ದಾನೆ ಎನ್ನಲಾಗಿದೆ. ಆದರೂ ಭಿಕ್ಷಾಟನೆ ಮುಂದುವರಿಸಿದ್ದಾನೆ.
ಈ ಹಿಂದೆ ಮೇಸ್ತ್ರಿಯಾಗಿದ್ದು, ಕುಷ್ಠ ರೋಗ ಬಾಧಿಸಿದ ಬಳಿಕ ಭಿಕ್ಷೆ ಬೇಡುತ್ತಿದ್ದ 50 ವರ್ಷದ ವ್ಯಕ್ತಿ ಬಳಿ ಮೂರು ಮನೆಗಳು, ಒಂದು ಕಾರು ಮತ್ತು ಬಾಡಿಗೆಗೆ ಬಿಟ್ಟ ಮೂರು ಆಟೊರಿಕ್ಷಾಗಳು ಇರುವುದು ಗೊತ್ತಾಗಿದೆ.
ಇಂದೋರ್ನಲ್ಲಿ ಭಿಕ್ಷಾಟನೆ ನಿಮೂರ್ಲನೆಗೆ ಕೈಗೊಂಡ ಅಭಿಯಾನ ಸಂದರ್ಭದಲ್ಲಿ ಈ ವಿಷಯ ಬಯಲಿಗೆ ಬಂದಿದೆ. ಈ ಮಾಹಿತಿ ತಿಳಿದು ಅಧಿಕಾರಿಗಳು ದಂಗಾಗಿದ್ದಾರೆ.
ಸಾರ್ವಜನಿಕರೊಬ್ಬರು ನೀಡಿದ ಮಾಹಿತಿ ಮೇರೆಗೆ ಮಧ್ಯಪ್ರದೇಶದ ಸರಫಾ ಎಂಬ ಪ್ರದೇಶದಿಂದ ಅಧಿಕಾರಿಗಳು ಭಿಕ್ಷುಕನನ್ನು ರಕ್ಷಿಸಿದರು. ‘ಇವರು ಹಲವರಿಗೆ ಚಿನಿವಾರ ಪೇಟೆಯಲ್ಲಿ ಹೂಡಿಕೆ ಮಾಡಲು ಸಾಲ ನೀಡುತ್ತಿದ್ದರು’ ಎಂದು ಭಿಕ್ಷಾಟನೆ ನಿರ್ಮೂಲನೆ ಅಭಿಯಾನದ ನೋಡಲ್ ಅಧಿಕಾರಿ ದಿನೇಶ್ ಮಿಶ್ರಾ ತಿಳಿಸಿದ್ದಾರೆ.
‘ಇವರು ಮೂರು ಅಂತಸ್ತಿನ ಒಂದು ಮನೆ ಸೇರಿ ಮೂರು ಕಾಂಕ್ರೀಟ್ ಮನೆಗಳನ್ನು ಹೊಂದಿದ್ದಾರೆ. ಮೂರು ಆಟೊರಿಕ್ಷಾ ಗಳನ್ನು ಬಾಡಿಗೆಗೆ ನೀಡಿದ್ದಾರೆ. ಭಿಕ್ಷಾಟನೆಗೆ ಸ್ವಂತ ಕಾರಿನಲ್ಲಿ ಬರುತ್ತಿದ್ದ ಇವರು ಚಾಲಕನನ್ನೂ ನೇಮಿಸಿಕೊಂಡಿದ್ದಾರೆ. ಕಾರಿನಿಂದ ಇಳಿದು, ಚಕ್ರವಿರುವ ಹಲಗೆ ಮೇಲೆ ಭಿಕ್ಷಾಟನೆ ನಡೆಸುತ್ತಿದ್ದರು’ ಎಂದು ಮಾಹಿತಿ ನೀಡಿದ್ದಾರೆ.
‘2021ರಿಂದ ಇವರು ಭಿಕ್ಷಾಟನೆ ಯಲ್ಲಿ ತೊಡಗಿದ್ದಾರೆ. ಚಿನಿವಾರ ಪೇಟೆಯಲ್ಲಿ ವಹಿವಾಟು ನಡೆಸಲು ಹಲವರಿಗೆ ₹4 ಲಕ್ಷದಿಂದ ₹5 ಲಕ್ಷ ದವರೆಗೆ ಸಾಲ ನೀಡಿದ್ದಾರೆ. ಇದರಿಂದ ಇವರಿಗೆ ದಿನಕ್ಕೆ ₹1,000ರಿಂದ ₹2,200 ಬಡ್ಡಿ ಬರುತ್ತಿದೆ. ಜೊತೆಗೆ, ಭಿಕ್ಷಾಟನೆಯಿಂದ ದಿನಕ್ಕೆ ₹400 ರಿಂದ ₹500 ದೊರೆಯುತ್ತಿದೆ’ ಎಂದು ತಿಳಿಸಿದ್ದಾರೆ.
‘ಮಾನವೀಯ ನೆಲೆಯಿಂದ ನೋಡಿ’
‘ಕುಷ್ಠ ರೋಗ ಬಾಧಿತ ಈ ವ್ಯಕ್ತಿಯ ವಿಚಾರವನ್ನು ನಾವು ಮಾನವೀಯ ನೆಲೆಯಿಂದ ನೋಡಬೇಕು. ಇಷ್ಟೆಲ್ಲಾ ಹಣ – ಆಸ್ತಿಯನ್ನು ಅವರು ಭಿಕ್ಷಾಟನೆಯಿಂದ ಗಳಿಸಿಲ್ಲ. ಕೆಲವು ವರ್ಷಗಳ ಹಿಂದೆ ಈ ವ್ಯಕ್ತಿಯು ಮೇಸ್ತ್ರಿ ಕೆಲಸ ಮಾಡುತ್ತಿದ್ದರು’ ಎಂದು ಭಿಕ್ಷಾಟನೆ ನಿರ್ಮೂಲನೆಗಾಗಿ ಕೆಲಸ ಮಾಡುತ್ತಿರುವ ‘ಪ್ರವೇಶ್’ ಎಂಬ ಎನ್ಜಿಒ ಅಧ್ಯಕ್ಷೆ ರೂಪಾಲಿ ಜೈನ್ ಅಭಿಪ್ರಾಯಪಟ್ಟರು.
‘ಭಿಕ್ಷಾಟನೆ ತ್ಯಜಿಸುವಂತೆ ನಾವು ಕಳೆದ ನಾಲ್ಕು ವರ್ಷದಿಂದ ಹೇಳುತ್ತಲೇ ಬಂದಿದ್ದೇವೆ. ನಾವು ಮಾತನಾಡಿ ಕೆಲವು ದಿನಗಳವರೆಗೆ ಭಿಕ್ಷಾಟನೆ ನಿಲ್ಲಿಸುತ್ತಿದ್ದರು. ಬಳಿಕ, ಮತ್ತೆ ಪ್ರಾರಂಭಿಸುತ್ತಿದ್ದರು. ಕುಷ್ಠ ರೋಗದ ಬಗ್ಗೆ ಜನರಲ್ಲಿ ಇರುವ ಮೌಢ್ಯದ ಕಾರಣ, ಇಂಥ ಜನರಿಗೆ ಪುನರ್ವಸತಿ ಕಲ್ಪಿಸುವುದು ಕಷ್ಟಕರ’ ಎಂದರು.
ಇಂದೋರ್, ‘ಭಿಕ್ಷಾಟನೆ ಮುಕ್ತ’ ನಗರವಾಗಿದೆ. ಭಿಕ್ಷುಕರಿಗೆ ಪುನರ್ವಸತಿ ಕಲ್ಪಿಸುತ್ತಿದ್ದೇವೆ. ಈ ವ್ಯಕ್ತಿಯ ಆಸ್ತಿಗಳ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುತ್ತೇವೆ.
–ಶಿವಂ ವರ್ಮಾ, ಜಿಲ್ಲಾ ಮ್ಯಾಜಿಸ್ಟ್ರೇಟ್
ಕುಷ್ಠ ರೋಗದಿಂದ ಅವರು ಮೇಸ್ತ್ರಿ ಕೆಲಸ ಬಿಟ್ಟರು. ಬಳಿಕ, ಈ ಸಮಾಜ, ಅವರ ಕುಟುಂಬ ಇವರನ್ನು ದೂರ ಮಾಡಿತು. ಬಳಿಕ ಇವರು ರಾತ್ರಿ ವೇಳೆ ಭಿಕ್ಷೆ ಬೇಡುತ್ತಿದ್ದರು.
–ರೂಪಾಲಿ ಜೈನ್, ಅಧ್ಯಕ್ಷೆ, ‘ಪ್ರವೇಶ್’


