ಬೆಳಗಾವಿ: ಎಸ್ ಎಸ್ ಎಲ್ ಸಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಲೀಕ್ ಆಗದು ಎಂಬ ಅಧಿಕಾರಿಗಳ ಮಾತು ಈಗ ಸುಳ್ಳಾಗಿದೆ. ಬೆಳಗಾವಿಯಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಗೊಂಡಿರುವುದು ಅಧಿಕಾರಿಗಳ ಪಾಲಿಗೆ ದೊಡ್ಡ ಮುಜುಗರ ಉಂಟು ಮಾಡಿದೆ.
ಸಮಾಜ ವಿಜ್ಞಾನ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಗೊಂಡಿದ್ದು ಪೋಷಕರ ಆತಂಕಕ್ಕೆ ಕಾರಣವಾಗಿದೆ. ಈ ಘಟನೆ ಬೆಳಗಾವಿಯ ಪಾಲಿಗೆ ಬಹುದೊಡ್ಡ ಕಪ್ಪು ಚುಕ್ಕೆಯಾಗಿ ಪರಿಣಮಿಸಿದೆ.
ಬೆಳಗಾವಿಯ ಸಂತ ಮೀರಾ ಇಂಗ್ಲಿಷ್ ಮಾಧ್ಯಮ ಶಾಲೆಯ ಕೋಡ್ ಇದೆ. ಸಿಸಿಟಿವಿ ದೃಶ್ಯ ನೋಡಿ ಪರಿಶೀಲನೆ ಮಾಡಲಾಗುವುದು. 17 ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ಯಲ್ಲಿ ಓದುತ್ತಿದ್ದಾರೆ. ವಿದ್ಯಾರ್ಥಿಗಳಿಗೂ ಮಾತನಾಡಿಸಿ ಕೇಳಿದ್ದೇನೆ. ಎಲ್ಲರ ಮಾಹಿತಿ ಸಂಗ್ರಹಿಸಿದ್ದು ವರದಿ ಸಿದ್ದಪಡಿಸಿ ಇಲಾಖೆ ಕಳಿಸುವುದಾಗಿ ಡಿಡಿಪಿಐ ಲೀಲಾವತಿ ಹಿರೇಮಠ ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ಪ್ರಶ್ನಾ ಪತ್ರಿಕೆ ಸೋರಿಕೆಗೂ ಮೊದಲು ಕಲಬುರ್ಗಿಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಗೊಂಡಿದೆ. ಈ ಬಗ್ಗೆ ಬೆಂಗಳೂರು ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದರ ಬೆನ್ನಿಗೆ ಈಗ ಬೆಳಗಾವಿಯಲ್ಲಿ ಪ್ರಶ್ನೆ ಪತ್ರಿಕೆ ಲೀಕ್ ಆಗಿರುವುದು ಇಲಾಖೆಯ ಪಾಲಿಗೆ ಬಹುದೊಡ್ಡ ಮುಜುಗರ ಉಂಟುಮಾಡಿದೆ. ಸೋರಿಕೆಗೊಂಡಿರುವ ಪ್ರಶ್ನೆ ಪತ್ರಿಕೆ instagram ನಲ್ಲಿ ಲಭ್ಯವಿದೆ ಎಂಬ ಮಾಹಿತಿ ಸಿಕ್ಕಿದೆ.
ವೈರಲ್ : ಎಸ್.ಎಸ್.ಎಲ್.ಸಿ ಪೂರ್ವ ಸಿದ್ಧತಾ ಪರೀಕ್ಷೆ-1ರ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಘಟನೆ ನಡೆದಿದೆ. ಪರೀಕ್ಷೆಗೂ ಮುನ್ನವೇ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಬೆಳಗಾವಿಯಲ್ಲಿ ಎಸ್.ಎಸ್.ಎಲ್.ಸಿ ಪೂರ್ವಸಿದ್ಧತಾ ಪರೀಕ್ಷೆ-1ರ ಸಮಾಜ ವಿಜ್ಞಾನ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನೆ ಪತ್ರಿಕೆ ಹರಿದಾಡುತ್ತಿದೆ. ಡೆಲ್ಟಾ ಎಸ್.ಎಸ್.ಎಲ್.ಸಿ ಇನ್ ಸ್ಟಾ ಗ್ರಾಂ ನಲ್ಲಿಯೂ ಪ್ರಶ್ನೆ ಪತ್ರಿಕೆ ವೈರಲ್ ಆಗಿದೆ. ಪ್ರತಿ ವರ್ಷವೂ ಈ ಖಾತೆ ಪರೀಕ್ಷೆ ಸಮಯದಲ್ಲಿ ಸಕ್ರಿಯವಾಗುತ್ತದೆ. ಕಳೆದ ವರ್ಷವೂ ಇದೇ ಖಾತೆಯಿಂದ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿತ್ತು. ಆದರೂ ಪರೀಕ್ಷಾ ಮಂಡಳಿ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಇದೀಗ ಈ ವರ್ಷವೂ ಇದೇ ಖಾತೆ ಮತ್ತೆ ಸಕ್ರಿಯವಾಗಿದ್ದು, ಪ್ರಶ್ನೆ ಪತ್ರಿಕೆ ವೈರಲ್ ಆಗಿದೆ.
ಪ್ರಶ್ನೆಪತ್ರಿಕೆ ಲೀಕ್ ಆಗುವುದಿಲ್ಲ ಎಂಬ ನಂಬಿಕೆ ಶುದ್ದ ಸುಳ್ಳು


