ಕೃಷಿ ಭೂಮಿ ಅಕ್ರಮ ಲೇಔಟ್ ಗೆ ಕಾಂಚನಕ್ಕಾಗಿ ಕರೆಂಟ್ ಕೊಟ್ಟು ಕಿತಾಪತಿ ಮಾಡಿದ ಕಾಕತಿ KEB ಅಧಿಕಾರಿಗಳು..?
ಗ್ರಾಪಂ, ಕಂದಾಯ ಇಲಾಖೆ NOC ಇಲ್ಲದಿದ್ದರೂ ಬಾಂಡ್ ಸೈಟ್ ಗೆ ಕನೆಕ್ಷನ್ ಕೊಟ್ಟಿದ್ದು ಹೇಗೆ..?
ಲಂಚಕ್ಕಾಗಿ ರೂಲ್ಸ್ ಮುರಿದ KEB ಕರಪ್ಟ್ ಆಫೀಸರ್ ಯಾರು..?
ಅಕ್ರಮ ಲೇಔಟ್ ದಂಧೆ ಬಂದ ಮಾಡಿಸ್ತಾರಾ ತಹಶಿಲ್ದಾರ ಬಸವರಾಜ..?
ಬೆಳಗಾವಿ: ಕೃಷಿ ಮಾಡುತ್ತೇನೆ ಎಂದು ಭೂಮಿ ಖರೀದಿಸಿ ಅದರಲ್ಲಿ ಅಕ್ರಮವಾಗಿ ಲೇಔಟ್ ಹಾಕಿ ಬಾಂಡ್ ಮೇಲೆ ಸೈಟ್ ಮಾರಾಟ ಮಾಡಿ ಕೋಟ್ಯಂತರ ರೂಪಾಯಿ ಗಳಿಸಿರುವ ಅಕ್ರಮ ಲೇಔಟ್ ದಂಧೆಕೋರ ಸ್ಥಳೀಯ ಗ್ರಾಮ ಪಂಚಾಯಿತಿ ಹಾಗೂ ಕಂದಾಯ ಇಲಾಖೆಯವರಿಂದ NOC ಪಡೆಯದೆ ಕಾಕತಿ KEB ಅವರ ಜೇಬು ಬಿಸಿ ಮಾಡಿ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದಿದ್ದಾನೆ.
ಜನಸಾಮಾನ್ಯರು ವಿದ್ಯುತ್ ಸಂಪರ್ಕ ಬೇಕಾದರೆ 10 ಹಲವಾರು ದಾಖಲೆಗಳನ್ನು ಕೇಳುವ ಕೆಇಬಿನವರು ಈ ಅಕ್ರಮ ಲೇಔಟ್ ದಂಧೆ ಕೋರನ ಬಿಡಿಗಾಸಿಗೆ ಜೊಲ್ಲು ಸೋರಿಸಿ ರಾಥೋರಾತ್ರಿ ವಿದ್ಯುತ್ ಸಂಪರ್ಕ ನೀಡಿದ್ದಲ್ಲದೆ, ಆತ ಯಾವುದೇ ಪರವಾನಿಗೆ ಪಡೆಯದೆ ಕೊರೆಸಿದ ಕೊಳವೆಬಾವಿಗೂ ಸಹ ಸಂಪರ್ಕ ನೀಡಿದ್ದಾರೆ.
ಇಂದು ಜನಜೀವಾಳ ಈ ಅಕ್ರಮ ಲೇಔಟ್ ಬಗ್ಗೆ ವಿಸ್ತೃತ ವರದಿ ಮಾಡಿದ ನಂತರ ಸ್ಥಳಕ್ಕೆ ಭೇಟಿ ನೀಡಿದ ಅಗಸಗಿ ಗ್ರಾಮ ಪಂಚಾಯಿತಿ ಪಿಡಿಒ ಮುಜಾವರ್, ಅಧ್ಯಕ್ಷ ಉಪಾಧ್ಯಕ್ಷ, ಹಾಗೂ ಸಿಬ್ಬಂದಿಗಳು ಪರಿಶೀಲನೆ ನಡೆಸಿದ ವೇಳೆ ಅಕ್ರಮವಾಗಿ ಈ ವಿದ್ಯುತ್ ಸಂಪರ್ಕ ನೀಡಿರುವ ಬಗ್ಗೆ ಗೊತ್ತಾಗಿದೆ.
ಆ ಅಕ್ರಮ ಲೇಔಟ್ ದಂಧೇಕೊರ ಈ ಅಕ್ರಮ ವಿದ್ಯುತ್ ಸಂಪರ್ಕವನ್ನು ತೋರಿಸಿ ಇನ್ನುಳಿದವರಿಗೆ ಸೈಟ್ ಮಾರಾಟ ಮಾಡಿರುವುದಾಗಿಯೂ ಗೊತ್ತಾಗಿದೆ.
ಕೃಷಿ ಭೂಮಿಯಲ್ಲಿ ಲೇಔಟ್ ಹಾಕಿ ಬಾಂಡ್ ಮೇಲೆ ಸೈಟಗಳನ್ನು ಮಾರಾಟ ಮಾಡುತ್ತಿರುವ ಈತ ಕಾಕತಿ ಕೆಇಬಿನವರಿಗೆ ಭಾರಿ ಮೊತ್ತದಲ್ಲಿ ಲಂಚ ನೀಡಿರುವುದಾಗಿ ಕೂಡ ತಿಳಿದು ಬಂದಿದೆ.
ಕೊನೆಗೂ ಕ್ರಮಕ್ಕೆ ಮುಂದಾದ ಕಂದಾಯ ಇಲಾಖೆ.
ಈ ಅಕ್ರಮ ಲೇಔಟ್ ನೋಡಿದ ನಂತರ ಈ ದಂಧೆಕೋರ ಸಂಪೂರ್ಣ ಕಾನೂನು ಬಹಿರವಾಗಿ ಸೈಟಗಳನ್ನು ಬಾಂಡ್ ಮೇಲೆ ಮಾರಾಟ ಮಾಡುತ್ತಿರುದಲ್ಲದೇ, ಪಿಡಬ್ಲ್ಯೂಡಿ, PRD, ಹೆಸ್ಕಾಂ ಹಾಗೂ ಕಂದಾಯ ಇಲಾಖೆಯ ನಿಯಮಗಳನ್ನು ಗಾಳಿಗೆ ತೂರಿ ಸೈಟ್ ಹಾಕಿರುವುದು ಸ್ಪಷ್ಟವಾದ ಬೆನ್ನಲ್ಲೇ ಈತನಿಗೆ ಮತ್ತು ವಿದ್ಯುತ್ ಸಂಪರ್ಕ ನೀಡಿರುವ ಕಾಕತಿ ಕೆಇಬಿನವರಿಗೆ ನೋಟಿಸ್ ನೀಡಲು ಮುಂದಾಗಿದೆ.


