ಬೆಳಗಾವಿ: ಕೆ.ಎಲ್.ಎಸ್ ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿ ಸಿದ್ಧಾಂತ್ ದೇಶಪಾಂಡೆ ಹುಬ್ಬಳ್ಳಿಯ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ [ಕೆಎಸ್ಎಲ್ಯು]ದ ಟೇಬಲ್ ಟೆನಿಸ್ನಲ್ಲಿ ವಿಶ್ವವಿದ್ಯಾಲಯದ ಯೂನಿವರ್ಸಿಟಿ ಬ್ಲೂ ಆಗಿ ಹೊರ ಹೊಮ್ಮಿದ್ದಾರೆ.
ಅವರು ಚೆನ್ನೈಯ ಎಎಂಇಟಿ ವಿಶ್ವವಿದ್ಯಾಲಯದಲ್ಲಿ ನಡೆಯುವ ಆಂತರ್ ವಿಶ್ವವಿದ್ಯಾಲಯ ಟೇಬಲ್ ಟೆನಿಸ್ ಟೂರ್ನಿಗಳಲ್ಲಿ ಕೆಎಸ್ಎಲ್ಯುಯನ್ನು ಪ್ರತಿನಿಧಿಸುತ್ತಾರೆ.
ಆರ್ಎಲ್ಎಲ್ಸಿ ಆಡಳಿತ ಮಂಡಳಿ ಅಧ್ಯಕ್ಷ ಆರ್.ಎಸ್. ಮುತಾಲಿಕ, ಪ್ರಾಚಾರ್ಯ ಡಾ. ಎ.ಎಚ್. ಹವಾಲ್ದಾರ, ಜಿಮ್ಖಾನಾ ಯೂನಿಯನ್ ಅಧ್ಯಕ್ಷ ಡಾ. ಪ್ರಸನ್ನ ಕುಮಾರ್ ಡಿ, ಸಹಾಯಕ ದೈಹಿಕ ನಿರ್ದೇಶಕ ಅಮಿತ್ ಬಿ. ಜಾಧವ್, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಸಿದ್ಧಾಂತ್ ದೇಶಪಾಂಡೆಯವರನ್ನು ಅಭಿನಂದಿಸಿದ್ದಾರೆ.
ಫೋಟೋ ಕ್ಯಾಪ್ಶನ್: ಬಲದಿಂದ ಎಡಕ್ಕೆ: ಡಾ. ಎ.ಎಚ್. ಹವಾಲ್ದಾರ್, ಸಿದ್ಧಾಂತ್ ದೇಶಪಾಂಡೆ, ಡಾ. ಪ್ರಸನ್ನ್ಕುಮಾರ್ ಡಿ., ಮತ್ತು ಅಮಿತ್ ಬಿ. ಜಾಧವ್.
“`


