ಬೆಳಗಾವಿ : ಇಲ್ಲಿನ ಕೋಟೆ ಅವರಣದ ರಾಮಕೃಷ್ಣ ಮಿಷನ್ ಆಶ್ರಮದಲ್ಲಿ ಶ್ರೀ ಶಾರದಾ ದೇವಿ ಜಯಂತಿ ಮಹೋತ್ಸವ ಡಿ.11 ರಂದು ನಡೆಯಲಿದೆ. ಬೆಳಗ್ಗೆ 6:15ಕ್ಕೆ ಉಷಾ ಕೀರ್ತನೆ, 9:30 ಕ್ಕೆ ಶ್ರೀ ಲಲಿತಾ ಸಹಸ್ರನಾಮ ಪಾರಾಯಣ, 10:15 ಕ್ಕೆ ಹೋಮ, ವೇದಘೋಷ, 11 ಕ್ಕೆ ಭಜನೆ, 12 ಕ್ಕೆ ಪ್ರವಚನ, 12:45 ಕ್ಕೆ ಪುಷ್ಪಾಂಜಲಿ, ನಾಮ ಸಂಕೀರ್ತನೆ, 1:15 ಕ್ಕೆ ಆರತಿ, ಸಂಜೆ 6 ಕ್ಕೆ ದೇವಿ ಸ್ತುತಿ, ಪಾರಾಯಣ, 6:30ಕ್ಕೆ ವಿಶೇಷ ಆರತಿ ಭಜನೆ ನಡೆಯಲಿದೆ ಎಂದು ರಾಮಕೃಷ್ಣ ಆಶ್ರಮದ ಪ್ರಕಟಣೆ ತಿಳಿಸಿದೆ.


