ಬೆಳಗಾವಿ: ಪ್ರತಿಬಾರಿಯ ಬೆಳಗಾವಿ ಉತ್ತರಾಧಿವೇಶನದಲ್ಲಿ ಉತ್ತರ ಕರ್ನಾಟಕ ಕುರಿತ ಚರ್ಚೆ ಕೊನೆಯ ಆದ್ಯತೆಯಾಗುತ್ತಿರುವ ಬಗ್ಗೆ ಟೀಕೆಗಳು ವ್ಯಕ್ತವಾ ಗುತ್ತಿರುವ ಬೆನ್ನಲ್ಲೇ, ಪ್ರಸಕ್ತ ಅಧಿವೇಶನದಲ್ಲಿ ಮಂಗಳವಾರದಿಂದಲೇ ಉತ್ತರ ಕರ್ನಾಟಕ ಸಮಸ್ಯೆ ಹಾಗೂ ಅಭಿವೃದ್ಧಿ ಕುರಿತು ಚರ್ಚೆ ಪ್ರಾರಂಭಿಸಲು ಕಲಾಪ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಈವರೆಗೆ ಸಾಮಾನ್ಯವಾಗಿ 2ನೇ ವಾರ ಉ. ಕ. ಬಗ್ಗೆ ಚರ್ಚೆ ಕೈಗೆತ್ತಿಕೊಳ್ಳಲಾಗುತ್ತಿತ್ತು.
ಇದೀಗ ಮೊದಲ ವಾರದ 2ನೇ ದಿನದಿಂದಲೇ ಉ. ಕರ್ನಾಟಕ ಚರ್ಚೆಗೆ ಅವಕಾಶ ನೀಡಲು ತೀರ್ಮಾನಿಸಲಾಗಿದೆ. ಡಿ.9ರಿಂದ ಡಿ.12ರವರೆಗೆ ಉ. ಕರ್ನಾಟಕ ಬಗ್ಗೆ ಚರ್ಚೆ ನಡೆಯಲಿದೆ.
ಯಾವ ವಿಷಯ ಪ್ರಸ್ತಾಪ?
ಉತ್ತರ ಕರ್ನಾಟಕ ಅಭಿವೃದ್ಧಿ ಕೊರತೆ, ಪ್ರಾದೇಶಿಕ ಅಸಮತೋಲನ, ಕಬ್ಬು ಹಾಗೂ ಮೆಕ್ಕೆಜೋಳ ಬೆಂಬಲ ಬೆಲೆ, ರೈತರ ಸರಣಿ ಆತ್ಮಹತ್ಯೆ,
ಕೃಷ್ಣಾ ಮೇಲ್ದಂಡೆ ಯೋಜನೆ 3ನೇ ಹಂತದ ಆಮೆಗತಿ, ಮಹದಾಯಿ ಸ್ಕಿಂ, ಕಳೆದ 2.5 ವರ್ಷದಲ್ಲಿ ನೀಡಲಾಗಿದ್ದ ಈಡೇರದ ಭರವಸೆಗಳ ಬಗ್ಗೆ ಚರ್ಚೆ ನಡೆಯಲಿದೆ.


