ಬೆಳಗಾವಿ : ಭಾರತ ಸ್ಕೌಟ್ ಗೈಡ್ ರಾಜ್ಯ ಉಪಾಧ್ಯಕ್ಷ ಗಜಾನನ ಮನ್ನಿಕೇರಿ ಅವರು ಕಳೆದ 25 ವರ್ಷಗಳಿಂದ ಸ್ಕೌಟ್ ಗೈಡ್ ನಲ್ಲಿ ಸಲ್ಲಿಸಿದ ಸೇವೆ ಗಮನಿಸಿ ಉತ್ತರ ಪ್ರದೇಶ ರಾಜ್ಯಪಾಲೆ ಆನಂದಿ ಬೆನ್ ಪಟೇಲ್ ಅವರು ಬಾರ್ ಟು ಸಿಲ್ವರ್ ಸ್ಟಾರ್ ಪ್ರಶಸ್ತಿ ನೀಡಿ ಗೌರವಿಸಿದರು. ಲಕ್ನೋದಲ್ಲಿ ನಡೆದ ಸಮಾರಂಭದಲ್ಲಿ ಅವರು ಪ್ರಶಸ್ತಿ ಸ್ವೀಕರಿಸಿದರು.


