ನವದೆಹಲಿ: ವಸಾಹತುಶಾಹಿ ಗುರುತುಗಳನ್ನು ಅಳಿಸಿ ಹಾಕುವ ಉದ್ದೇಶದಿಂದ ರಾಜ್ಯಪಾಲರ ಅಧಿಕೃತ ನಿವಾಸವನ್ನು ‘ರಾಜಭವನ’ದ ಬದಲಿಗೆ ‘ಲೋಕ ಭವನ’ ಎಂದು ಮರುನಾಮಕರಣ ಮಾಡಬೇಕೆಂದು ಕೇಂದ್ರ ಗೃಹ ಸಚಿವಾಲಯ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶ ಗಳಿಗೆ ಸೂಚನೆ ನೀಡಿದೆ.
ಇದರ ಬೆನ್ನಲ್ಲೇ, ಕೇರಳ ರಾಜಭವನವು ಸೋಮವಾರ ಮರುನಾಮಕರಣಕ್ಕೆ ಮುಂದಾಗಿದೆ. ಅಸ್ಸಾಂ, ತಮಿಳುನಾಡು, ಪಶ್ಚಿಮ ಬಂಗಾಳ, ಲಡಾಖ್ ರಾಜ್ಯಪಾಲರು ಈಗಾಗಲೇ ಈ ಆದೇಶವನ್ನು ಜಾರಿಗೆ ತಂದಿದ್ದಾರೆ. ಕೇಂದ್ರದ ಆದೇಶದನ್ವಯ ದೆಹಲಿ ಸೇರಿದಂತೆ ಕೇಂದ್ರಾಡಳಿತ ಪ್ರದೇಶಗಳ ಲೆಫ್ಟಿನೆಂಟ್ ಗೌರರ್ಗಳ ‘ರಾಜ ನಿವಾಸ’ವನ್ನು ‘ಲೋಕ ನಿವಾಸ’ ವಾಗಿ ಹೆಸರಿಸಲು ನಿರ್ಧರಿಸಲಾಗಿದೆ.


