ಬೆಂಗಳೂರು: ರಾಜ್ಯದಲ್ಲಿ ನಿನ್ನೆ ಒಂದೇ ದಿನ 5000ಕ್ಕೂ ಹೆಚ್ಚು ವಿವಾಹಗಳು ನಡೆದಿರುವ ಬಗ್ಗೆ ವರದಿಯಾಗಿದೆ. ಎಲ್ಲೆಡೆ ಮದುವೆ ಕಾರಣಕ್ಕೆ ಛತ್ರಗಳು ಬಹುತೇಕ ತುಂಬಿ ತುಳುಕಾಡಿದವು. ಶಾಮಿಯಾನ, ಹೂವಿನ ವ್ಯಾಪಾರ ಸೇರಿದಂತೆ ಮದುವೆ ಪರಿಕರಗಳ ವ್ಯಾಪಾರ ತುಸು ಭರ್ಜರಿಯಾಗಿ ನಡೆಯಿತು. ಭಾದ್ರಪದ ನಕ್ಷತ್ರ ಜೊತೆ ಸರ್ವ ಸಿದ್ದಿ ಯೋಗ ಕಾರಣಕ್ಕೆ ರವಿವಾರ ಹೆಚ್ಚಿನ ಸಂಖ್ಯೆಯಲ್ಲಿ ಮದುವೆ ನಡೆಯಿತು.


