ಬೆಳಗಾವಿ :
ಕೆಎಲ್ಇ ಸಂಸ್ಥೆಯ ಜಿಎ ಪದವಿ ಪೂರ್ವ ಮಹಾವಿದ್ಯಾಲಯದ ವಾರ್ಷಿಕ ವಿಶೇಷ ಶಿಬಿರ ನ. 21ರಿಂದ 27ರವರೆಗೆ ಜಾಫರವಾಡಿಯ ಸರಕಾರಿ ಮರಾಠಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಲಾಗಿದೆ. 21ರಂದು ಮಧ್ಯಾಹ್ನ 1 ಕ್ಕೆ ಕಡೋಲಿ ಗ್ರಾಪಂ ಅಧ್ಯಕ್ಷ ಸಾಗರ ಪಾಟೀಲ ಉದ್ಘಾಟಿಸುವರು. ಜಿಎ ಮಹಾವಿದ್ಯಾಲಯದ ಪ್ರಾಚಾರ್ಯ ಡಿ. ಎಸ್.ಪವಾರ್ ಅಧ್ಯಕ್ಷತೆ ವಹಿಸುವರು. ಕಡೋಲಿ ಪಿಡಿಒ ಕೃಷ್ಣಬಾಯಿ ಭಂಡಾರಿ, ಎಸ್ಡಿಎಂಸಿ ಚೇರ್ಮನ್ ತಾನಾಜಿ ಪಾಟೀಲ, ಮುಖ್ಯ ಶಿಕ್ಷಕಿ ಪಿ.ಬಿ. ಹಾಲೆನ್ನವರ ಉಪಸ್ಥಿತರಿರುವರು.
ನ. 22 ರಂದು ಮಧ್ಯಾಹ್ನ 3 ಕ್ಕೆ ವ್ಯಕ್ತಿತ್ವ ವಿಕಸನ ಮತ್ತು ನಾಯಕತ್ವ ಗುಣಗಳು ವಿಷಯವಾಗಿ ಪ್ರಾಚಾರ್ಯ ಎಸ್.ಎ.ನಿರ್ವಾಣಿ ಉಪನ್ಯಾಸ ನೀಡುವರು. ಗ್ರಾಪಂ ಸದಸ್ಯ ಲಕ್ಷ್ಮಣ ಗೌಂಡಾಡಕರ ಅಧ್ಯಕ್ಷತೆ ವಹಿಸುವರು. 23 ರಂದು ಯೋಗ ಮತ್ತು ಧ್ಯಾನ ವಿಷಯವಾಗಿ ಯೋಗ ಶಿಕ್ಷಕ ಮಹಾಂತೇಶ ಪಿ.ಬಿ. ಉಪನ್ಯಾಸ ನೀಡುವರು. ಗ್ರಾಪಂ ಸದಸ್ಯೆ ಶೋಭಾ ಪಾಟೀಲ ಅಧ್ಯಕ್ಷತೆ ವಹಿಸುವರು. 24 ರಂದು ರಾಜಕೀಯ ಜಾಗೃತಿ, ಪ್ರಜಾಪ್ರಭುತ್ವ ಹೆಜ್ಜೆ ಗುರುತು ವಿಷಯವಾಗಿ ಬೋಧಕ ಸಹಾಯಕ ಪ್ರಕಾಶ ಕಮತಿ ಉಪನ್ಯಾಸ ನೀಡುವರು. ನಿವೃತ್ತ ಯೋಧ ನಾರಾಯಣ ಪಾಟೀಲ ಅಧ್ಯಕ್ಷತೆ ವಹಿಸುವರು. ಕಲ್ಲಪ್ಪ ಗೌಂಡಾಡ್ಕರ್, ನಾರಾಯಣ ಪಾಟೀಲ ಉಪಸ್ಥಿತರಿರುವರು. 25 ರಂದು ಮಧ್ಯಾಹ್ನ 3ಕ್ಕೆ ಲಿಂಗಾನುಪಾತ ವ್ಯತ್ಯಾಸ, ಕಾರಣಗಳು, ಪರಿಣಾಮ ವಿಷಯವಾಗಿ ನಿವೃತ್ತ ಪ್ರಾಚಾರ್ಯ ಆರ್.ಎಸ್.ಪಾಟೀಲ ಉಪನ್ಯಾಸ ನೀಡುವರು. ಗ್ರಾಪಂ ಸದಸ್ಯೆ ರೇಖಾ ನರೋಟೆ ಅಧ್ಯಕ್ಷತೆ ವಹಿಸುವರು. 26 ರಂದು ಬೆಳಗ್ಗೆ 11ಕ್ಕೆ ಆರೋಗ್ಯ ತಪಾಸಣಾ ಶಿಬಿರ ಮತ್ತು ಮಹಿಳೆಯರ ರಕ್ತ ಹೀನತೆ, ಕಾರಣ, ಪರಿಹಾರ ವಿಷಯವಾಗಿ ಆರೋಗ್ಯ ಅಧಿಕಾರಿ ಡಾ. ಪ್ರಶಾಂತ ಗಾಯಕವಾಡ ಉಪನ್ಯಾಸ ನೀಡುವರು. ಸಮುದಾಯ ಆರೋಗ್ಯ ಅಧಿಕಾರಿ ಪ್ರಶಾಂತ ಕೋಲ್ಕಾರ್ ಉಪನ್ಯಾಸ ನೀಡುವರು. ಶಿಕ್ಷಕ ಎಂ.ಪಿ. ಪಾಟೀಲ ಅಧ್ಯಕ್ಷತೆ ವಹಿಸುವರು. ಎಸ್ ಡಿ ಎಂ ಸಿ ಮಾಜಿ ಚೇರ್ಮನ್ ವಾಮನ ಮುತಗೇಕರ, ಉಪನ್ಯಾಸಕರಾದ ಉಪಸ್ಥಿತರಿರುವರು. 27 ರಂದು ಮಧ್ಯಾಹ್ನ 12ಕ್ಕೆ ಸಮಾರೋಪ ನಡೆಯಲಿದೆ. ಪ್ರಾಚಾರ್ಯ ಡಿ.ಎಸ್. ಪವಾರ್ ಅಧ್ಯಕ್ಷತೆ ವಹಿಸುವರು. ಉಪ ಪ್ರಾಚಾರ್ಯ ಸಿ.ಪಿ. ದೇವರುಷಿ, ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ದೀಪಾ ಮರಗಾಳೆ ಉಪಸ್ಥಿತರಿರುವರು.
ಕಾರ್ಯಕ್ರಮದ ಅಧಿಕಾರಿ ಉಪನ್ಯಾಸಕ ಟಿ ಪಿ ಬಾನಕರೆ ಅವರ ಮುಂದಾಳತ್ವದಲ್ಲಿ ನಡೆಯುತ್ತಿರುವ ಈ ಶಿಬಿರದಲ್ಲಿ ಉಪನ್ಯಾಸಕರಾದ ಎಂ ಪಿ ಬಿರಾದಾರ, ಎಸ್ಎನ್ ಮಡಿವಾಳರ, ಎಸ್ ಆರ್ ಗುಮ್ಮಗೋಳ ಸಹಾಯಕ ಶಿಬಿರಾಧಿಕಾರಿಗಳಾಗಿ ಕಾರ್ಯ ನಿರ್ವಹಿಸಲಿದ್ದಾರೆ.
ಬೆಳಗಾವಿ ಜಿಎ ಪದವಿಪೂರ್ವ ಮಹಾವಿದ್ಯಾಲಯದ ವಾರ್ಷಿಕ ವಿಶೇಷ ಎನ್ಎಸ್ಎಸ್ ಶಿಬಿರ ನ. 21 ರಿಂದ 27ರವರೆಗೆ ಆಯೋಜನೆ


