ಬೆಳಗಾವಿ: ಇಂದಿನ ವಿದ್ಯಾರ್ಥಿಗಳಲ್ಲಿ ದೇಶಾಭಿಮಾನ ಹೆಚ್ಚಾಗಬೇಕು. ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಹಾಡು ,ದೇಶಭಕ್ತಿ ಗೀತೆ ,ಸಂಗೀತ, ಹಾಗೂ ದೇಶಿಯ ಕ್ರೀಡೆ ಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿ ಒಗ್ಗೂಡಿಸಿ ಸ್ವಾತಂತ್ರ್ಯ ದಕ್ಕಿಸುವಲ್ಲಿ ಯಶಸ್ವಿ ಕಂಡಿದ್ದರು. ಅಂತವರು ನಮಗೆ ಬಳುವಳಿಯಾಗಿ ನೀಡಿದ ದೇಶದಲ್ಲಿ ಉತ್ತಮ ಪ್ರಜೆಗಳಾಗಿ ದೇಶದಲ್ಲಿರುವ ನಾವು ದೇಶಾಭಿಮಾನಿಗಳಾಗಿ ದೇಶ ಕಟ್ಟುವ ಕಲಿಗಳಾಗಬೇಕು ಎಂದು ಕರ್ನಾಟಕ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ನ ರಾಜ್ಯ ಉಪಾಧ್ಯಕ್ಷ ಹಾಗೂ ಜಿಲ್ಲಾ ಮುಖ್ಯ ಆಯುಕ್ತ ಗಜಾನನ ಮನ್ನಿಕೇರಿ ಹೇಳಿದರು .
ಅವರು ತಿಳಕವಾಡಿಯ ಜಿಲ್ಲಾ ಕೇಂದ್ರ ಕಾರ್ಯಾಲಯ ಸ್ಕೌಟ್ ಭವನದಲ್ಲಿ ಗುರುವಾರರಂದು ಜಿಲ್ಲಾಮಟ್ಟದ ಗೀತ ಗಾಯನ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದವರು, ವಿದ್ಯಾರ್ಥಿಗಳು ಹಾಗೂ ಯುವಜನರಲ್ಲಿ ದೇಶಭಕ್ತಿ ಇಮ್ಮಡಿ ಗೊಳಿಸುವ ಇದೊಂದು ಕಾರ್ಯಕ್ರಮ. ಪ್ರತಿಯೊಬ್ಬರೂ ದೇಶದ ಸಮಗ್ರ ಏಕತೆ, ಭಾಷೆ , ನೆಲ, ಜಲ ಸಂರಕ್ಷಣೆಗಾಗಿ ಒಂದಾಗಬೇಕೆಂದರು .
ಬೆಳಗಾವಿ ಗ್ರಾಮೀಣ ಬಿಇಓ ಆಂಜನೇಯ ಅವರು ಮಾತನಾಡಿ, ಕರ್ನಾಟಕ ಹಾಗೂ ಬೆಳಗಾವಿಯಲ್ಲಿ ಸ್ಕೌಟ್ಸ್ ಚಳುವಳಿ ಹೆಚ್ಚಿಸಲು ಗಜಾನನ ಮನ್ನಿಕೇರಿ ಅವರ ಪಾತ್ರ ಹೆಚ್ಚಿದೆ. ಈ ಚಳುವಳಿಯು ಜಾತಿ, ಧರ್ಮ ಭೇದವಿಲ್ಲದೆ ಮುಕ್ತವಾದ ಸಂಸ್ಥೆ . ಇದು ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನ, ನಾಯಕತ್ವ , ಶಿಸ್ತು ಬೆಳೆಸುವುದರ ಜೊತೆಗೆ ಸುಸಂಸ್ಕೃತ ಜವಾಬ್ದಾರಿಯುತ ನಾಗರಿಕರನ್ನಾಗಿ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.
ಬೆಳಗಾವಿ ಸಿಟಿ ಬಿಆರ್ಸಿ ಆರ್ ಡಿ ಹಿರೇಮಠ, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ದೈಹಿಕ ಶಿಕ್ಷಣ ಅಧೀಕ್ಷಕ ಜುನೇದಿ ಪಟೇಲ್ ಮಾತನಾಡಿದರು. ಬೆಳಗಾವಿ ಜಿಲ್ಲೆಯ 15 ತಾಲೂಕಿನಿಂದ ಸ್ಕೌಟ್ಸ್, ಗೈಡ್ಸ್, ಕಬ್ಸ್ ,ಬುಲ್ ಬುಲ್, ನಾಲ್ಕು ವಿಭಾಗಗಳಿಂದ 380ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡು ದೇಶಭಕ್ತಿ ಗೀತೆ ಹಾಡಿದರು.
ಈ ಸಂದರ್ಭದಲ್ಲಿ ನಿವೃತ್ತ ಕೆನರಾ ಬ್ಯಾಂಕ್ ಮ್ಯಾನೇಜರ್ ದಿಲೀಪ ಮಾಳಗಿ , ಖ್ಯಾತ ಗಾಯಕಿ ಶುಭಾಂಗಿ ಕಾರೆಕರ, ವಿಟ್ಟಲ್ ಎಸ್ ಬಿ, ಗುತ್ತಿಗೆದಾರ ಬಿಎಮ್ ಹಳ್ಳೂರ, ಎನ್ ಜಿ ಪಾಟೀಲ, ರಾಜಕುಮಾರ ಕುಂಬಾರ, ಸಿ ಎಸ್ ಹಿರೇಮಠ, ವಿ ಎಸ್ ಬೀಳಗಿ, ವೈಶಾಲಿ ಅಳಗುಂಡಿ, ಪ್ರಭಾವತಿ ಮಾನೆ, ಸುನಿತಾ ಕಾವಳೆ, ಜಯಶ್ರೀ ಪತ್ತಾರ, ಮಹಾನಂದ ಬಾಲನ್ನವರ , ಶ್ರೀಧರ ಬಿಸಿಲಾಪೂರ ಇದ್ದರು, ವಿಠ್ಠಲ್ ಎಸ್ ಬಿ ಸ್ವಾಗತಿಸಿದರು . ಸ್ಥಳೀಯ ಸಂಸ್ಥೆ ಕಾರ್ಯದರ್ಶಿ ಸಿಟಿ ಪೂಜಾರ ನಿರೂಪಿಸಿ ವಂದಿಸಿದರು.


