ಬೆಳಗಾವಿ:ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಬಿ. ಎ. ಅಂತಿಮ ವರ್ಷದ ವಿದ್ಯಾರ್ಥಿಗಳು ಬೆಳಗಾವಿ ಲಿಂಗರಾಜ ಮಹಾವಿದ್ಯಾಲಯದ ಕನ್ನಡ, ಇಂಗ್ಲಿಷ್ ಮತ್ತು ಹಿಂದಿ ವಿಭಾಗಗಳ ಸಹಯೋಗದಲ್ಲಿ ನ. 11ರಂದು ಆಯೋಜಿಸಿದ್ದ ನ್ಯಾಷನಲ್ ಕಲ್ಚರಲ್ ಪೆಸ್ಟ್ ಅಡಿಯಲ್ಲಿ ‘ನೃತ್ಯದ ಮೂಲಕ ಶಾಸ್ತ್ರೀಯ ಕಥೆ’ ಹೇಳುವ ನೃತ್ಯ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಪ್ರಾಚಾರ್ಯ ಪ್ರೊ . ಎಸ್. ಸಿ. ಪಾಟೀಲ, ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥರು ಮತ್ತು ಸಿಬ್ಬಂದಿ ವರ್ಗ ಇವರನ್ನು ಅಭಿನಂದಿಸಿದರು.


